ರಾಮನಗರ, ಡಿಸೆಂಬರ್ 20: ಜಿಲ್ಲೆಯಲ್ಲಿ 2ನೇ ಕೋವಿಡ್ ಪ್ರಕರಣ ಪತ್ತೆ ಆಗಿದೆ. ರಾಮನಗರದಲ್ಲಿ 21 ವರ್ಷದ ಯುವತಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ಯುವತಿಗೆ ಐಸೋಲೇಷನ್ ಮಾಡಿದ್ದು, ಕೊರೊನಾ ಸೋಂಕಿತ ಯುವತಿ ತಾಯಿಗೂ ಕೊವಿಡ್ ಟೆಸ್ಟ್ ಮಾಡಲಾಗಿದೆ. ಪಕ್ಕದ ವಾರ್ಡ್ನಲ್ಲೇ ಸೋಂಕಿತ ಮತ್ತೋರ್ವ ವಿದ್ಯಾರ್ಥಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕ್ಕಮಗಳೂರಿನಲ್ಲಿ ಇಬ್ಬರಿಗೆ ಕೊರೊನಾ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೊನಾ ಆತಂಕ ಶುರುವಾಗಿದೆ. ನಿನ್ನೆ ಟೆಸ್ಟ್ ಮಾಡಿಸಿಕೊಂಡ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಮತ್ತೊಮ್ಮೆ ಇಬ್ಬರ ಕೋವಿಡ್ ಟೆಸ್ಟ್ಗಾಗಿ ಅಧಿಕಾರಿಗಳು ಸ್ಯಾಂಪಲ್ ಕಳುಹಿಸಿದ್ದಾರೆ. ನಿನ್ನೆ ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸಿಕೊಂಡಿದ್ದರು.
ಮತ್ತೆ ಲ್ಯಾಬ್ ಫಲಿತಾಂಶ ಬಂದ ಬಳಿಕ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ಕುರಿತಾಗಿ ಟಿವಿ 9ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ: ಡಿಹೆಚ್ಓ ನಿರಜ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕೊರೊನಾ ರೂಪಾಂತರಿ ವೈರಸ್ ಪ್ರಕರಣ ವಿಚಾರವಾಗಿ ಡಿಹೆಚ್ಓ ನಿರಜ ಪ್ರತಿಕ್ರಿಯೆ ನೀಡಿದ್ದು, ಡಿಸೆಂಬರ್ 10ಕ್ಕೆ ಜಿಲ್ಲೆಯಲ್ಲಿ ಒಂದು ಕೊವಿಡ್ ಪ್ರಕರಣ ಕಂಡುಬಂದಿತ್ತು. ಕೆಲಸಕ್ಕೆಂದು ಗೋವಾಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಸದ್ಯ ಆ ವ್ಯಕ್ತಿ ಪೂರ್ತಿ ಗುಣ ಮುಖನಾಗಿದ್ದಾನೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಯಾರೂ ಕೂಡ ಹೆದರುವ ಅವಶ್ಯಕತೆ ಇಲ್ಲ. ಇಲಾಖೆಯ ಹೊಸ ಗೈಡ್ ಲೈನ್ಸ್ ಪ್ರಕಾರ ನಾವು ರೆಡಿ ಆಗಿದ್ದೇವೆ. ಕೋವಿಡ್ ಸೆಂಟರ್ ಹಾಗೂ ಆಕ್ಸಿಜನ್ ಪ್ಲ್ಯಾಂಟ್ ಸೇರಿದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದೇವೆ. ಹೊಸ ವರ್ಷಾಚರಣೆಗೆ ಕಾರವಾರಕ್ಕೆ ಬರುವವರಿಗೆ ಸದ್ಯ ಯಾವುದೇ ನಿರ್ಬಂಧ ಹೇರಿಲ್ಲ. ವೈರಸ್ ತಿವ್ರತೆ ಹೆಚ್ಚಾಗಿ ಕಂಡು ಬಂದಲ್ಲಿ ನಿರ್ಬಂಧ ಹೇರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಸದ್ಯ ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧ ಇಲ್ಲ. ಪ್ರವಾಸಿಗರು ಕೋವಿಡ್ ಬಗ್ಗೆ ಯಾವುದೇ ಆತಂಕ ಬೇಡ ಎಚ್ಚರಿಕೆ ಇರಲಿ. ಹಾರ್ಟ್, ಅಸ್ತಮಾ ಸಮಸ್ಯೆ ಇರುವವರು ಬರದೆ ಇರೋದು ಒಳ್ಳೆಯದು. ಕೊರೊನಾ ಎದುರಿಸಲು ನಮ್ಮ ಜಿಲ್ಲಾ ಆರೋಗ್ಯ ಇಲಾಖೆ ರೆಡಿ ಇದೆ. ಕೊರೊನಾ ಸಂಖ್ಯೆ ಎಚ್ಚಾದ್ದಾರೆ ಗೋವಾ ಬಾರ್ಡರ್ನಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಾಬೇಕಾಗುತ್ತದೆ ಎಂದು ಹೇಳಿದ್ದಾರೆ.