IPL 2024 Auction: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

ಐಪಿಎಲ್ ಮಿನಿ ಹರಾಜಿಗಾಗಿ ಕೌಂಟ್ ಡೌನ್ ಶುರುವಾಗಿದೆ. ನಾಳೆ (ಡಿ.19) ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯಲಿರುವ ಆಕ್ಷನ್​ನಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಆದರೆ ಇವರಲ್ಲಿ ಅವಕಾಶ ಸಿಗಲಿರುವುದು ಕೇವಲ 77 ಆಟಗಾರರಿಗೆ ಮಾತ್ರ.

ಅಂದರೆ 10 ತಂಡಗಳಲ್ಲಿ ಕೇವಲ 77 ಸ್ಲಾಟ್​ಗಳು ಮಾತ್ರ ಖಾಲಿಯಿವೆ. ಹೀಗಾಗಿ 333 ಪ್ಲೇಯರ್​ಗಳಲ್ಲಿ ಎಪ್ಪತ್ತೇಳು ಆಟಗಾರರಿಗೆ ಮಾತ್ರ ಅವಕಾಶ ಸಿಗಲಿದೆ. ಅದರಂತೆ ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ…

1- ಚೆನ್ನೈ ಸೂಪರ್ ಕಿಂಗ್ಸ್ (CSK): ಈ ಬಾರಿಯ ಹರಾಜಿನಲ್ಲಿ ಸಿಎಸ್​ಕೆ ತಂಡವು ಒಟ್ಟು 6 ಆಟಗಾರರನ್ನು ಖರೀದಿಸಬಹುದು. ಇವರಲ್ಲಿ 3 ವಿದೇಶಿ ಆಟಗಾರರನ್ನು ಹಾಗೂ ಮೂವರು ಭಾರತೀಯ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು.

2- ಗುಜರಾತ್ ಟೈಟಾನ್ಸ್ (GT): ಗುಜರಾತ್ ಟೈಟಾನ್ಸ್ ತಂಡಕ್ಕೆ ಒಟ್ಟು 8 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇದರಲ್ಲಿ 6 ಭಾರತೀಯ ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಖರೀದಿಸಬಹುದು.

3- ಕೋಲ್ಕತ್ತಾ ನೈಟ್ ರೈಡರ್ಸ್ (KKR): ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದಲ್ಲಿ ಖಾಲಿಯಿರುವ ಸ್ಲಾಟ್​ಗಳ ಸಂಖ್ಯೆ 12. ಈ ಸ್ಥಾನಗಳಲ್ಲಿ 8 ಭಾರತೀಯ ಹಾಗೂ 4 ವಿದೇಶಿ ಆಟಗಾರರನ್ನು ಖರೀದಿಸಬಹುದು.

4- ಸನ್‌ರೈಸರ್ಸ್ ಹೈದರಾಬಾದ್ (SRH): ಎಸ್​ಆರ್​ಹೆಚ್​ ತಂಡದಲ್ಲಿ 6 ಸ್ಥಾನಗಳು ಖಾಲಿಯಿವೆ. ಈ ಸ್ಲಾಟ್​ಗಳಲ್ಲಿ ಮೂವರು ಭಾರತೀಯರು ಹಾಗೂ ಮೂವರು ವಿದೇಶಿ ಆಟಗಾರರನ್ನು ಖರೀದಿಸಬಹುದು.

5- ಮುಂಬೈ ಇಂಡಿಯನ್ಸ್ (MI): ಇಂಡಿಯನ್ಸ್​ ತಂಡವು ಒಟ್ಟು 8 ಸ್ಲಾಟ್​ಗಳನ್ನು ಹೊಂದಿದೆ. ಇದರಲ್ಲಿ ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

5- ಮುಂಬೈ ಇಂಡಿಯನ್ಸ್ (MI): ಇಂಡಿಯನ್ಸ್​ ತಂಡವು ಒಟ್ಟು 8 ಸ್ಲಾಟ್​ಗಳನ್ನು ಹೊಂದಿದೆ. ಇದರಲ್ಲಿ ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

5- ಮುಂಬೈ ಇಂಡಿಯನ್ಸ್ (MI): ಇಂಡಿಯನ್ಸ್​ ತಂಡವು ಒಟ್ಟು 8 ಸ್ಲಾಟ್​ಗಳನ್ನು ಹೊಂದಿದೆ. ಇದರಲ್ಲಿ ನಾಲ್ವರು ವಿದೇಶಿ ಹಾಗೂ ನಾಲ್ವರು ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

8- ಡೆಲ್ಲಿ ಕ್ಯಾಪಿಟಲ್ಸ್ (DC): ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 9 ಸ್ಲಾಟ್​ಗಳನ್ನು ಹೊಂದಿದ್ದು, ಇದರಲ್ಲಿ 4 ವಿದೇಶಿ ಮತ್ತು ಐವರು ಭಾರತೀಯ ಆಟಗಾರರನ್ನು ಖರೀದಿಸಬಹುದು.

9- ಪಂಜಾಬ್ ಕಿಂಗ್ಸ್ (PBKS): ಪಂಜಾಬ್ ತಂಡದಲ್ಲಿ ಒಟ್ಟು 8 ಸ್ಥಾನಗಳು ಖಾಲಿಯಿದೆ. ಈ ಸ್ಲಾಟ್​ಗಳಲ್ಲಿ ಇಬ್ಬರು ವಿದೇಶಿ ಹಾಗೂ 6 ಭಾರತೀಯ ಆಟಗಾರರನ್ನು ಖರೀದಿಸಬಹುದಾಗಿದೆ.

10- ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ಆರ್​ಸಿಬಿ ತಂಡಕ್ಕೆ ಈ ಬಾರಿ ಒಟ್ಟು 6 ಆಟಗಾರರನ್ನು ಖರೀದಿಸುವ ಅವಕಾಶವಿದೆ. ಈ ಆರು ಸ್ಲಾಟ್​ಗಳಲ್ಲಿ 3 ವಿದೇಶಿ ಹಾಗೂ ಮೂವರು ಭಾರತೀಯ ಆಟಗಾರರನ್ನು ಖರೀದಿಸಬಹುದು.