Ram Janmabhoomi temple ನಿರ್ಮಾಣ ಕಾರ್ಯವನ್ನು ತೋರಿಸುವ ನಾಲ್ಕು ಚಿತ್ರಗಳನ್ನು ಟ್ರಸ್ಟ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಮುಂದಿನ ವರ್ಷ ಜನವರಿ 22ರಂದು ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಯೋಧ್ಯೆಯಲ್ಲಿ ನಡೆಯುತ್ತಿರುವ ದೇವಾಲಯದ ಮೊದಲ ಮಹಡಿಯ ನಿರ್ಮಾಣದ ಫೋಟೋವನ್ನು ಹಂಚಿಕೊಂಡಿದೆ.
ನಿರ್ಮಾಣ ಕಾರ್ಯವನ್ನು ತೋರಿಸುವ ನಾಲ್ಕು ಚಿತ್ರಗಳನ್ನು ಟ್ರಸ್ಟ್ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದೆ. ಮುಂದಿನ ವರ್ಷ ಜನವರಿ 22ರಂದು ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಕಳೆದ ವಾರ, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಮತ್ತು ವಿಎಚ್‌ಪಿ ನಾಯಕ ಚಂಪತ್ ರೈ ಅವರು ದೇವಾಲಯದ ಗರ್ಭಗುಡಿಯ (ಗರ್ಭ ಗೃಹ) ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ, ರಾಮಲಲ್ಲಾನ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ. ನಂತರ ಭಕ್ತರಿಗೆ ಅವಕಾಶ ನೀಡಲಾಗುವುದು.
ರಾಮ ಜನ್ಮಭೂಮಿ ದೇವಸ್ಥಾನದಲ್ಲಿ, ಒಂದು 4’3” ಅಯೋಧ್ಯೆಯ ಮೂರು ಸ್ಥಳಗಳಲ್ಲಿ ಭಗವಾನ್ ರಾಮನ 5 ವರ್ಷದ ಮಗುವಿನ ರೂಪವನ್ನು ಬಿಂಬಿಸುವ ವಿಗ್ರಹವನ್ನು ನಿರ್ಮಿಸಲಾಗುತ್ತಿದೆ.
ಮೂವರು ಕುಶಲಕರ್ಮಿಗಳು ಮೂರು ವಿಭಿನ್ನ ಕಲ್ಲಿನ ತುಂಡುಗಳ ಮೇಲೆ ವಿಗ್ರಹವನ್ನು ಕೆತ್ತಿದ್ದಾರೆ. ಈ ವಿಗ್ರಹಗಳು 90 ಪ್ರತಿಶತ ಸಿದ್ಧವಾಗಿದ್ದು. ಇದಕ್ಕೆ ಕೊನೆಯ ಸ್ಪರ್ಶವನ್ನು ನೀಡಲಾಗುತ್ತಿದೆ ಎಂದು ಹೇಳಿದೆ
ರಾಮಮಂದಿರ ಜನವರಿ 22ರಂದು ಲೋಕಾರ್ಪಣೆಗೊಳ್ಳಿದೆ. ಈಗಾಗಲೇ ಪ್ರತಿಯೊಬ್ಬ ರಾಮ ಭಕ್ತರಿಗೂ ಲೋಕಾರ್ಪಣೆ ಸಮಾರಂಭದ ಆಮಂತ್ರಣ ಹೋಗಿದೆ. ಈ ಕಾರ್ಯದಲ್ಲಿ ಹಿಂದೂ ಸಂಘಟನೆಗಳು ತೋಡಗಿಸಿಕೊಂಡಿದೆ.
ಆಗಸ್ಟ್ 5, 2020 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಅಡಿಪಾಯವನ್ನು ಪ್ರಧಾನಿ ಮೋದಿಯವರು ಹಾಕಿದರು. ಇದೀಗ ಇದರ ಲೋಕಾರ್ಪಣೆ ಕೂಡ ಮೋದಿ ಅವರೇ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ 10 ಕೋಟಿ ಹಿಂದೂಗಳು ಭಾಗವಹಿಸುವ ಸಾಧ್ಯತೆ ಎಂದು ಹೇಳಲಾಗಿದೆ.