ಇಂಡಿಯನ್ ಪ್ರೀಮಿಯರ್ ಲೀಗ್ನ 17ನೇ ಆವೃತ್ತಿಯ ಹರಾಜಿಗಾಗಿ ಫೈನಲ್ ಪಟ್ಟಿ ಸಿದ್ಧವಾಗಿದೆ. ಈ ಬಾರಿಯ ಐಪಿಎಲ್ ಆಕ್ಷನ್ಗಾಗಿ ಹೆಸರು ನೋಂದಾಯಿಸಿಕೊಂಡಿದ್ದ 1166 ಆಟಗಾರರಲ್ಲಿ ಕೇವಲ 333 ಪ್ಲೇಯರ್ಸ್ಗೆ ಮಾತ್ರ ಹರಾಜಿನಲ್ಲಿ ಅವಕಾಶ ನೀಡಲಾಗಿದೆ. ಇವರಲ್ಲಿ 214 ಭಾರತೀಯ ಆಟಗಾರಿದ್ದರೆ, 121 ವಿದೇಶಿ ಆಟಗಾರರಿದ್ದಾರೆ. ವಿಶೇಷ ಎಂದರೆ ಈ 333 ಆಟಗಾರರಲ್ಲಿ ಕೇವಲ 23 ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಅಂದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ 2 ಕೋಟಿ ರೂ. ಬೇಸ್ ಪ್ರೈಸ್ ಘೋಷಿಸಿರುವುದು ಕೇವಲ 23 ಆಟಗಾರರು ಮಾತ್ರ. ಇವರಲ್ಲಿ 20 ವಿದೇಶಿ ಆಟಗಾರರು ಎಂಬುದು ವಿಶೇಷ. ಅಂದರೆ ಮೂವರು ಭಾರತೀಯ ಆಟಗಾರರು ಮಾತ್ರ 2 ಕೋಟಿ ರೂ. ಮೂಲ ಬೆಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆ ಆಟಗಾರರು ಯಾರೆಲ್ಲಾ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…
2 ಕೋಟಿ ರೂ. ಮೂಲ ಬೆಲೆ ಹೊಂದಿರುವ ಆಟಗಾರರ ಪಟ್ಟಿ:
- ಹ್ಯಾರಿ ಬ್ರೂಕ್ – ಇಂಗ್ಲೆಂಡ್
- ಟ್ರಾವಿಸ್ ಹೆಡ್ – ಆಸ್ಟ್ರೇಲಿಯಾ
- ರಿಲೀ ರೊಸೊವ್ – ಸೌತ್ ಆಫ್ರಿಕಾ
- ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ
- ಜೆರಾಲ್ಡ್ ಕೋಟ್ಝಿ – ದಕ್ಷಿಣ ಆಫ್ರಿಕಾ
- ಪ್ಯಾಟ್ ಕಮ್ಮಿನ್ಸ್ – ಆಸ್ಟ್ರೇಲಿಯಾ
- ಕ್ರಿಸ್ ವೋಕ್ಸ್ – ಇಂಗ್ಲೆಂಡ್
- ಜೋಶ್ ಇಂಗ್ಲಿಸ್ – ಆಸ್ಟ್ರೇಲಿಯಾ
- ಲಾಕಿ ಫರ್ಗುಸನ್ – ನ್ಯೂಜಿಲೆಂಡ್
- ಜೋಶ್ ಹ್ಯಾಝಲ್‌ವುಡ್ – ಆಸ್ಟ್ರೇಲಿಯಾ
- ಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾ
- ಮುಜೀಬ್ ಉರ್ ರೆಹಮಾನ್ – ಅಫ್ಘಾನಿಸ್ತಾನ್
- ಜೇಮೀ ಓವರ್ಟನ್ – ಇಂಗ್ಲೆಂಡ್
- ಡೇವಿಡ್ ವಿಲ್ಲಿ – ಇಂಗ್ಲೆಂಡ್
- ಬೆನ್ ಡಕೆಟ್ – ಇಂಗ್ಲೆಂಡ್
- ಮುಸ್ತಾಫಿಜುರ್ ರೆಹಮಾನ್ – ಬಾಂಗ್ಲಾದೇಶ್
- ಆದಿಲ್ ರಶೀದ್ – ಇಂಗ್ಲೆಂಡ್
- ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ – ಸೌತ್ ಆಫ್ರಿಕಾ
- ಜೇಮ್ಸ್ ವಿನ್ಸ್ – ಇಂಗ್ಲೆಂಡ್
- ಸೀನ್ ಅಬಾಟ್ – ಆಸ್ಟ್ರೇಲಿಯಾ
- ಹರ್ಷಲ್ ಪಟೇಲ್ – ಭಾರತ
- ಶಾರ್ದೂಲ್ ಠಾಕೂರ್ – ಭಾರತ
- ಉಮೇಶ್ ಯಾದವ್ – ಭಾರತ
ಐಪಿಎಲ್ ಸೀಸನ್ 17 ಹರಾಜು ಯಾವಾಗ?
ಈ ಬಾರಿಯ ಐಪಿಎಲ್ನಲ್ಲಿ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ 19 ರಂದು ದುಬೈನ ಕೋಕಾಕೋಲ ಅರೇನಾದಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ವೇಳೆ 333 ಆಟಗಾರರ ಹೆಸರುಗಳನ್ನು ಬಿಡ್ಡಿಂಗ್ಗಾಗಿ ಕೂಗಲಾಗುತ್ತದೆ. ಇದರಲ್ಲಿ ಕೇವಲ 77 ಆಟಗಾರರಿಗೆ ಮಾತ್ರ ಐಪಿಎಲ್ 2024 ರಲ್ಲಿ ಅವಕಾಶ ದೊರೆಯಲಿದೆ.