ಧಾರಾಕಾರ ಮಳೆಗೆ ಕುಸಿದು ಬಿದ್ದ ಗುಡಿಸಲು: ಮನೆ ಕಳೆದುಕೊಂಡು ಕುಟುಂಬ ಅತಂತ್ರ.!

ಹೊನ್ನಾವರ: ತಾಲೂಕಿನಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿದ ಹಿನ್ನೆಲೆ ಮನೆ ಕುಸಿದು ಬಿದ್ದ ಘಟನೆ ಮಂಕಿಯ ಹೆರಾಳಿ ಗ್ರಾಮದಲ್ಲಿ ನಡೆದಿದೆ. ಅಣ್ಣಪ್ಪ ಕುಪ್ಪ ನಾಯ್ಕ ಎಂಬುವವರಿಗೆ ಸೇರಿದ ಮನೆಯಾಗಿದೆ. ಮನೆಯ ಗೋಡೆಯ ಕಲ್ಲು, ಪಕಾಸಿ, ರೀಪು, ಹಂಚುಗಳು ನೆಲಕ್ಕೆ ಬಿದ್ದಿವೆ. ಗುಡಿಸಲಿನ ಮನೆ ಆಗಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರಕ್ಕಾಗಿ ಕುಟುಂಬಸ್ಥರು ಒತ್ತಾಯಿಸಿದ್ದಾರೆ.

https://youtu.be/wPkLDKqPT3o