ICC Rankings: ಐಸಿಸಿ ರ‍್ಯಾಂಕಿಂಗ್ ಪ್ರಕಟ: ಅಗ್ರಸ್ಥಾನದಲ್ಲಿ ಐವರು ಭಾರತೀಯರು

ಐಸಿಸಿ ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಹೊಸ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಐವರು ಆಟಗಾರರು ಅಗ್ರಸ್ಥಾನದಲ್ಲಿರುವುದು ವಿಶೇಷ. ಅಂದರೆ ಇಲ್ಲಿ ಏಕದಿನ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಶುಭ್​ಮನ್ ಗಿಲ್ ಅಗ್ರಸ್ಥಾನ ಅಲಂಕರಿಸಿದ್ದರೆ, ಟಿ20 ಕ್ರಿಕೆಟ್​ ಬ್ಯಾಟರ್​ಗಳ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ.

ಇನ್ನು ಟೆಸ್ಟ್ ಬೌಲರ್​ಗಳ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಟಾಪ್-1 ನಲ್ಲಿದ್ದರೆ, ಟೆಸ್ಟ್ ಆಲ್​ರೌಂಡರ್​​ಗಳ ರ‍್ಯಾಂಕಿಂಗ್​ನಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಟಿ20 ಬೌಲರ್​ಗಳ ಪಟ್ಟಿಯಲ್ಲಿ ಇದೇ ಮೊದಲ ಬಾರಿಗೆ ರವಿ ಬಿಷ್ಣೋಯ್ ಮೊದಲ ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದ ಯುವ ಸ್ಪಿನ್ನರ್ ಇದೀಗ ಅಫ್ಘಾನಿಸ್ತಾನದ ರಶೀದ್ ಖಾನ್​ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ಇದಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 223 ರನ್​ಗಳನ್ನು ಬಾರಿಸಿ ಅಬ್ಬರಿಸಿದ್ದ ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್​ ರ‍್ಯಾಂಕಿಂಗ್​ನಲ್ಲಿ 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಟಿ20 ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನದಲ್ಲಿದ್ದಾರೆ. ಅದರಂತೆ ಐಸಿಸಿಯ ನೂತನ ಟಾಪ್-10 ರ‍್ಯಾಂಕಿಂಗ್​ನಲ್ಲಿರುವ ಭಾರತೀಯ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.

ಟಿ20 ಬ್ಯಾಟರ್​ಗಳ ರ‍್ಯಾಂಕಿಂಗ್:

  • ಸೂರ್ಯಕುಮಾರ್ ಯಾದವ್ (1ನೇ ಸ್ಥಾನ)
  • ರುತುರಾಜ್ ಗಾಯಕ್ವಾಡ್ (7ನೇ ಸ್ಥಾನ)

ಟಿ20 ಬೌಲರ್​ಗಳ ರ‍್ಯಾಂಕಿಂಗ್:

  • ರವಿ ಬಿಷ್ಣೋಯ್ (1ನೇ ಸ್ಥಾನ)

ಟಿ20 ಆಲ್​ರೌಂಡರ್​ಗಳ ರ‍್ಯಾಂಕಿಂಗ್:

  • ಹಾರ್ದಿಕ್ ಪಾಂಡ್ಯ (3ನೇ ಸ್ಥಾನ)

ಟೆಸ್ಟ್​ ಬ್ಯಾಟರ್​ಗಳ ರ‍್ಯಾಂಕಿಂಗ್:

  •  ರೋಹಿತ್ ಶರ್ಮಾ (10ನೇ ಸ್ಥಾನ)

ಟೆಸ್ಟ್​ ಬೌಲರ್​ಗಳ ರ‍್ಯಾಂಕಿಂಗ್:

  • ರವಿಚಂದ್ರನ್ ಅಶ್ವಿನ್ (1ನೇ ಸ್ಥಾನ)
  • ರವೀಂದ್ರ ಜಡೇಜಾ (3ನೇ ಸ್ಥಾನ)

ಟೆಸ್ಟ್​ ಆಲ್​ರೌಂಡರ್​ಗಳ ರ‍್ಯಾಂಕಿಂಗ್:

  • ರವೀಂದ್ರ ಜಡೇಜಾ (1ನೇ ಸ್ಥಾನ)
  • ರವಿಚಂದ್ರನ್ ಅಶ್ವಿನ್ (2ನೇ ಸ್ಥಾನ)
  • ಅಕ್ಷರ್ ಪಟೇಲ್ (5ನೇ ಸ್ಥಾನ)