ಯಲ್ಲಾಪುರ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ತಗುಲಿ ಲಕ್ಷಾಂತರ ರೂ ಹಾನಿಯಾದ ಘಟನೆ ಪಟ್ಟಣದ ಜಡ್ಡಿಯಲ್ಲಿ ನಡೆದಿದೆ.
ಜಡ್ಡಿಯ ನಿವೃತ್ತ ಶಿಕ್ಷಕ ವಾದಿರಾಜ ಕುರ್ಡೇಕರ್ ಅವರ ಮನೆಯಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಟಿವಿ, ಕಂಪ್ಯೂಟರ್, ಫ್ರಿಜ್, ಕೂಲರ್, ಬಟ್ಟೆ, ಪೀಠೋಪಕರಣ, ಹಣ ಸೇರಿ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಸುಟ್ಟಿವೆ. ಮೇಲ್ಛಾವಣಿಗೂ ಹಾನಿಯಾಗಿದ್ದು, ಕುಸಿಯುವ ಭೀತಿ ಎದುರಾಗಿದೆ.
ಸ್ಥಳೀಯರು ಬೆಂಕಿ ಆರಿಸುವ ಪ್ರಯತ್ನ ನಡೆಸಿದ್ದು, ನಂತರ ವಿಷಯ ತಿಳಿದು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ವ್ಯಾಪಿಸದಂತೆ ತಡೆದರು