ಅಯೋಧ್ಯೆಯಲ್ಲಿ ನೂತನ ರಾಮಮಂದಿರ ಉದ್ಛಾಟನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ನೂತನ ರಾಮಮಂದಿರದ ಉದ್ಘಾಟನೆ ಆಗಲಿದೆ. ಈ ಮಧ್ಯೆ ಅಯೋಧ್ಯೆಯಲ್ಲಿ ಚಟುವಟಿಕೆಗಳು ಗರಿಗೆದರಿವೆ. ಅಯೋಧ್ಯೆಯ ಕರಸೇವಾಪುರಂನಲ್ಲಿ ಶ್ರೀರಂಗಪಟ್ಟಣದ ವೇದವಿದ್ವಂಸರಾದ ಶ್ರೀ ಭಾನುಪ್ರಕಾಶ್ ಶರ್ಮ ರವರ ಮಾರ್ಗದರ್ಶನದಲ್ಲಿ ಲೊಕಕಲ್ಯಾಣರ್ಥವಾಗಿ ಮಹಾಮೃತ್ಯಂಜಯ ಹೋಮ ಆಯೋಜಿಸಲಾಗಿದೆ.
ಮಾಹಾಮೃತ್ಯಂಜಯ ಹೋಮದ ಮಂಗಳಕಾರ್ಯದಲ್ಲಿ ಉಡಪಿಯ ಪೇಜಾವರ ಶ್ರೀ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಂಪಕರಾಯ್,ಮಂದಿರ ನಿರ್ಮಾಣದ ಉಸ್ತುವಾರಿಗಳಾದ ವಿಶ್ವ ಹಿಂದೂ ಪರಿಷತ್ ನ ಗೋಪಾಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾದ ಶ್ರೀ ನ ತಿಪ್ಪೇಸ್ವಾಮಿ, ಭಜರಂಗದಳದ ಸೂರ್ಯನಾರಾಯಣ, ಯಲಹಂಕ ಶಾಸಕರಾದ ಎಚ್,ಆರ್,ವಿಶ್ವನಾಥ, ಬಿಜೆಪಿ ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯ ,ತಮಿಳುನಾಡಿನ ಪ್ರಭಾರಿ ಡಾ.ವೆಂಕಟೇಶ ಮೌರ್ಯ,ಕಾರ್ಯಕ್ರಮದ ಆಯೋಜಕರಾದ ಕರ್ನಾಟಕ ವಿ ಹೆಚ್ ಪಿ,ಯ ಪ್ರಾಂಥ ಅದಿಕಾರಿ ಶ್ರೀ ಎನ್ ,ಪಿ ಮುನಿರಾಜು,ಶ್ರೀ ದನ್ರಾಜು, ಕರ್ನಾಟಕದಿಂದ 300ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದರು.
ರಾಮಮಂದಿರ ನಿರ್ಮಾಣ ಅಂತಿಮ ಹಂತಕ್ಕೆ ತಲುಪುತ್ತಿದೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಭಿಜಿತ್ ಮುಹೂರ್ತ ಮೃಗಶಿರಾ ನಕ್ಷತ್ರದಲ್ಲಿ ಮಧ್ಯಾಹ್ನ 12:20 ಕ್ಕೆ ರಾಮಲಲ್ಲಾ ಮಹಾಮಸ್ತಕಾಭಿಷೇಕವನ್ನು ನೆರವೇರಿಸಲಿದ್ದಾರೆ. ಈ ಕಾರ್ಯಕ್ಕೆ ಅಂತರಾಷ್ಟ್ರೀಯ ರೂಪ ನೀಡಲು ತಯಾರಿ ನಡದಿದೆ. ಸಮಾರಂಭವನ್ನು ನಾಲ್ಕು ಹಂತಗಳಾಗಿ ವಿಂಗಡಿಸಿ ಸಿದ್ಧತೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಮೊದಲ ಹಂತವು ರಾಮಲಲ್ಲಾ ಪ್ರತಿಷ್ಠಾನದ ತಯಾರಿ ಬಗ್ಗೆ ಡಿಸೆಂಬರ್ 20ರಂದು ಸಭೆ ನಡೆಲಾಗಿದೆ. ಇದರಲ್ಲಿ ಕಾರ್ಯ ಕ್ರಮದ ರೂಪುರೇಷೆ ಸಿದ್ಧಪಡಿಸಲಾಗುತ್ತದೆ. ಇದಕ್ಕಾಗಿ ಚಾಲನಾ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ತಲಾ 10 ಜನರ ಗುಂಪು ರಚಿಸಲು ಒಪ್ಪಿಗೆ ನೀಡಲಾಗಿದೆ.