ಭಟ್ಕಳ: ತಾಲೂಕಿನ ಮಳೆಯಿಂದ ಹಾನಿಯಾದ ನೆರೆ ಪ್ರದೇಶಕ್ಕೆ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮೂಡ ಭಟ್ಕಳ ಹಾಗೂ ಮಣ್ಕುಳಿಯ ಭಾಗಕ್ಕೆ ಭೇಟಿ ನೀಡಿ 100ಕ್ಕೂ ಅಧಿಕ ಮನೆಗಳನ್ನು ಪರಿಶೀಲಿಸಿದರು. ಕಳೆದ 2 ದಿನಗಳ ಹಿಂದಷ್ಟೇ ಸುರಿದ ಭಾರಿ ಮಳೆಗೆ ಇಡೀ ತಾಲೂಕು ಜಲಾವೃತಗೊಂಡು ಅಪಾರ ಹಾನಿಯಾಗಿದೆ. ಇಂದು ಮಳೆಹಾನಿಗೊಂಡ 2 ಸ್ಥಳಗಳಿಗೆ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಭೇಟಿ ನೀಡಿದರು. ಅಲ್ಲಿನ ಮನೆಗಳಿಗೆ ತೆರಳಿ ನಿವಾಸಿಗಳ ಅಹವಾಲುಗಳನ್ನು ಕೇಳಿದರು.
ಈ ಸಂದರ್ಭದಲ್ಲಿ ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಸುರೇಶ ನಾಯ್ಕ ಕೋಣೆಮನೆ, ಸುರೇಶ ವಿ ನಾಯ್ಕ ಮಣ್ಕುಳಿ ಮುಂತಾದವರು ಹಾಜರಿದ್ದರು.