ಭಟ್ಕಳದ ಅಂಜುಮನ್ ಪಿಯು ಕಾಲೇಜಿನಲ್ಲಿ ‘ಅಂಜುಮನ್ ಎಕ್ಸ್ ಪ್ಲೋರಾ-2023’ ಕಾರ್ಯಕ್ರಮ


ಭಟ್ಕಳದ ಅಂಜುಮನ್‌ ಪಿಯು ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಅಂಜುಮನ್ ಎಕ್ಸ್ ಪ್ಲೋರಾ-2023 ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ, INIFD ಗ್ಲೋಬಲ್ ಮಾರ್ಕೆಟಿಂಗ್ ಮತ್ತು ಆಪರೇಷನ್ಸ್ ಮುಖ್ಯಸ್ಥ ಮುಸಾಬ್ ಅಹ್ಮದ್ ಅಬಿದಾ ಮಾತನಾಡಿ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಮರ್ಪಣೆ ಮತ್ತು ಸಮಯಪಾಲನೆಯ ಮಹತ್ವದ ಬಗ್ಗೆ ತಿಳಿಸಿದ್ರು.

ಕಾರ್ಯಕ್ರಮದಲ್ಲಿ ಟ್ರೆಷರ್ ಹಂಟ್, ಮೆಮೊರಿ ಟೆಸ್ಟ್, ಪಿಕ್ ಅಂಡ್ ಸ್ಪೀಕ್, ಟಗ್ ಆಫ್ ವಾರ್ ಟ್ವಿಸ್ಟ್ ಮತ್ತು ಟರ್ನ್, ಮಿಸ್ಟರ್ ಫಿಟ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಈ ಸ್ಪರ್ಧೆಗಳಲ್ಲಿ ಸುಮಾರು 26 ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.

ಈ ವೇಳೆ ವೇದಿಕೆಯಲ್ಲಿ, ಅಂಜುಮನ್ ಹಮೀ-ಎ-ಮುಸ್ಲಿಮೀನ್, ಮಹಮ್ಮದ್ ಸಾದಿಕ್ ಪಿಲ್ಲೂರು ಕಾರ್ಯದರ್ಶಿ ಅಫ್ತಾಬ್ ಕಮ್ರಿ ಮತ್ತು ಅಂಜುಮನ್ ಸಂಸ್ಥೆಯ ಕಾರ್ಯಕಾರಿ ಸದಸ್ಯ ಮುಬಸ್ಶಿರ್ ಹಲ್ಲಾರೆ ಹಾಗೂ ಪ್ರಾಚಾರ್ಯ ಮೊಹಮ್ಮದ್ ಯೂಸುಫ್ ಕೋಲಾ ಉಪಸ್ಥಿತರಿದ್ದರು.