ಗೋವಾ ಓಪನ್ ಕರಾಟೆ ಚಾಂಪಿಯನಶಿಪ್ ಶ್ರೇಯಸ್ ಪ್ರಥಮ, ಶ್ರೇಯಾ ದ್ವಿತೀಯ.

ಅಂಕೋಲಾ : 9ನೇ ಗೋವಾ ಓಪನ್ ಆಲ್ ಇಂಡಿಯಾ ಕರಾಟೆ ಚಾಂಪಿಯನಶಿಪ್ ಜಿಯು ರೆಂಶುಕನ್ ಕಪ್ ಸ್ಪರ್ಧೆಯಲ್ಲಿ ಅಂಕೋಲಾದ ಸಂಜಾತರಾದ ಶ್ರೇಯಸ್ ಗಣೇಶ ಶೇಟ್ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಶ್ರೇಯಾ ಗಣೇಶ ಶೇಟ್ ದ್ವಿತೀಯ ಸ್ಥಾನ ಪಡೆಯುವದರೊಂದಿಗೆ ಉತ್ತಮ ಸಾಧನೆ ತೋರಿದ್ದಾರೆ. ಅದೇ ರೀತಿ ಶ್ರೇಯಸ್ ಕುಮಟೆ ವಿಭಾಗದಲ್ಲಿ ತೃತೀಯ ಸ್ಥಾನ ಮತ್ತು ಶ್ರೇಯಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ವರ್ಲ್ಡ್ ಪನ್ನಕೋಷಿ ಶೊಟೋಖಾನ್ ಕರಾಟೆ ಒರಗನೈಸೇಶನ್ ಕಾರವಾರ ಇದರ ಕರಾಟೆ ತರಬೇತಿದಾರ ಮಾಸ್ಟರ್ ಮುಸ್ತಫಾ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ಇತ್ತಿಉಚೆಗೆ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು.