IND vs AUS Final: ಭಾರತದ ಗೆಲುವು ಕಸಿದುಕೊಂಡ ಹೆಡ್; ಆಸ್ಟ್ರೇಲಿಯಾ ಏಕದಿನ ಚಾಂಪಿಯನ್

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾವನ್ನು ಮಣಿಸಿದ ಆಸ್ಟ್ರೇಲಿಯಾ ತಂಡ ದಾಖಲೆಯ 6ನೇ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ಇತ್ತ ಮೂರನೇ ಬಾರಿಗೆ ಏಕದಿನ ಚಾಂಪಿಯನ್ ಆಗುವ ಕನಸು ಕಂಡಿದ್ದ ಟೀಂ ಇಂಡಿಯಾಗೆ ಸೋಲಿನ ಆಘಾತ ಎದುರಾಗಿದೆ.

ಭಾರತ ನೀಡಿದ 241 ರನ್‌ಗಳ ಗೆಲುವಿನ ಸವಾಲನ್ನು ಆಸ್ಟ್ರೇಲಿಯಾ 43 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪೂರ್ಣಗೊಳಿಸಿತು. ಆಸೀಸ್ ಗೆಲುವಿನ ಹೀರೋ ಎನಿಸಿಕೊಂಡ ಟ್ರಾವಿಸ್ ಹೆಡ್ 137 ರನ್​ಗಳ ಇನ್ನಿಂಗ್ಸ್ ಆಡಿದರು. ಟೀಂ ಇಂಡಿಯಾ ಪರ ಬುಮ್ರಾ 2 ವಿಕೆಟ್ ಪಡೆದರೆ, ಶಮಿ ಹಾಗೂ ಸಿರಾಜ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.