ವಿಶ್ವಕಪ್​ನಲ್ಲಿ ಗೋಲ್ಡನ್ ಬ್ಯಾಟ್ ಮತ್ತು ಗೋಲ್ಡನ್ ಬಾಲ್​ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ

ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 19, 2023 ರಂದು ನಡೆಯಲಿದೆ. ಆಸ್ಟ್ರೇಲಿಯಾ ತಂಡ ಐದು ಬಾರಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಭಾರತ-ವೆಸ್ಟ್ ಇಂಡೀಸ್ ತಂಡ ತಲಾ 2 ಬಾರಿ ವಿಶ್ವಕಪ್ ಗೆದ್ದುಕೊಂಡಿದೆ. ಪಾಕಿಸ್ತಾನ್, ಶ್ರೀಲಂಕಾ ಮತ್ತು ಇಂಗ್ಲೆಂಡ್ ತಲಾ ಒಂದು ಬಾರಿ ವಿಶ್ವಕಪ್ ಗೆದ್ದಿವೆ. ಇನ್ನು ಪ್ರತಿ ವಿಶ್ವಕಪ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಐಸಿಸಿಯಿಂದ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಆ ಪ್ರಶಸ್ತಿಗಳಾವುವು ಎಂದು ತಿಳಿಯೋಣ…

ಗೋಲ್ಡನ್ ಬ್ಯಾಟ್​ ಪ್ರಶಸ್ತಿ:

ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಐಸಿಸಿ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು 1975 ರಿಂದ ಪ್ರಾರಂಭಿಸಲಾಯಿತು. ಈ ಬಾರಿ ವಿರಾಟ್ ಕೊಹ್ಲಿ ಗೋಲ್ಡನ್​ ಬ್ಯಾಟ್ ಪ್ರಶಸ್ತಿ ಗೆಲ್ಲುವ ರೇಸ್ ನಲ್ಲಿ ಮುಂದಿದ್ದಾರೆ. ಮೊಹಮ್ಮದ್ ಶಮಿ ಹಾಗೂ ಆ್ಯಡಂ ಝಂಪಾ ಗೋಲ್ಡನ್ ಬಾಲ್ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಇದುವರೆಗಿನ ವಿಶ್ವಕಪ್​ನಲ್ಲಿ ಗೋಲ್ಡನ್ ಬ್ಯಾಟ್ ಗೆದ್ದ ಬ್ಯಾಟರ್​ಗಳ ಪಟ್ಟಿ ಈ ಕೆಳಗಿನಂತಿದೆ…

ಗೋಲ್ಡನ್ ಬಾಲ್ ಪ್ರಶಸ್ತಿ:

ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಹೆಚ್ಚು ವಿಕೆಟ್ ಪಡೆದ ಆಟಗಾರನಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಪ್ರಸ್ತುತ ಇದನ್ನು “ಐಸಿಸಿ ಗೋಲ್ಡನ್ ಬಾಲ್” ಎಂದು ಕರೆಯಲಾಗುತ್ತದೆ. ಈ ಪ್ರಶಸ್ತಿಯನ್ನು ಪಡೆದ ಬೌಲರ್​ಗಳ ಪಟ್ಟಿ ಈ ಕೆಳಗಿನಂತಿದೆ…

ಪ್ಲೇಯರ್ ಆಫ್ ದಿ ಟೂರ್ನಮೆಂಟ್:

ವಿಶ್ವಕಪ್ ಪಂದ್ಯಾವಳಿಯುದ್ದಕ್ಕೂ ಪ್ರತಿ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1992 ರಲ್ಲಿ ನೀಡಲಾಯಿತು. ಪ್ರಸ್ತುತ “ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್” ಎಂದು ಹೆಸರಿಸಲಾಗಿದೆ. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..

ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ:

ವಿಶ್ವಕಪ್ ಫೈನಲ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ 1975 ರಲ್ಲಿ ನೀಡಲಾಯಿತು. ಈ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ..