ದೇವನಹಳ್ಳಿ: ವಿಮಾನದಲ್ಲಿ ಸಿಬ್ಬಂದಿ ಜೊತೆ ಪ್ರಯಾಣಿಕನ ಅಸಭ್ಯ ವರ್ತನೆ; ಬಂಧನ

ದೇವನಹಳ್ಳಿ ನ.19:ವಿಮಾನದಲ್ಲಿ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಯಾಣಿಕನನ್ನು ಕೆಂಪೇಗೌಡ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಣದೀರ್ ಸಿಂಗ್ ಬಂಧಿತ ಪ್ರಯಾಣಿಕ ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ 6E556 ಇಂಡಿಗೋ ವಿಮಾನದಲ್ಲಿ ರಣದೀರ್ ಸಿಂಗ್ ನಶೆಯಲ್ಲಿ ಪ್ಲೈಟ್ ಕ್ಯಾಬಿನ್ ಸ್ಟಾಪ್​​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಣಬೀರ್​ ಸಿಂಗ್​​ನನ್ನು ಬಂಧಿಸಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

3 ಪ್ರತ್ಯೇಕ ಪ್ರಕರಣಗಳಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ

ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಬ್ಯಾಂಕಾಕ್, ಕೊಲಂಬೋ ಮತ್ತು ಮಸ್ಕಟ್​​ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಕೆಜಿಗೂ ಅಧಿಕ‌‌ ಚಿನ್ನವನ್ನು ಜಪ್ತಿ ಮಾಡಿದ್ದರು.

ಬ್ಯಾಂಕಾಕ್​ನಿಂದ ಮೂವರು ಪುರುಷರು, ಕೊಲಂಬೋದ ಇಬ್ಬರು ಮಹಿಳೆಯರು ಮತ್ತು ಮಸ್ಕಟ್​ನ ಒರ್ವ ಪ್ರಯಾಣಿಕ ಶರ್ಟ್ ಮತ್ತು ಒಳ ಉಡುಪಿನಲ್ಲಿ ಚಿನ್ನದ ಕಟ್ ಫಿಸ್​​ಗಳನ್ನು ಅಡಗಿಸಿಟ್ಟುಕೊಂಡು ತಂದಿದ್ದರು.‌ ಕಸ್ಟಮ್ಸ್​​ ಅಧಿಕಾರಿಗಳ ತಪಾಸಣೆ ವೇಳೆ ಮೂರು ಪ್ರಕರಣಗಳಿಂದ 1,26,58, 618 ರೂ. ಮೌಲ್ಯದ 2 ಕೆಜಿ 79 ಗ್ರಾಂ ತೂಕದ ಚಿನ್ನ ಪತ್ತೆಯಾಗಿತ್ತು. ಮೂರು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಅಧಿಕಾರಿಗಳು ಪಡೆದು ವಿಚಾರಣೆ ನಡೆಸಿದ್ದರು.