ಚಿಕ್ಕಬಳ್ಳಾಪುರದಲ್ಲಿ ಝೀಕಾ ವೈರಸ್ ಪತ್ತೆ ಕೇಸ್​​​: 56 ಜನರ ರಕ್ತದ ಪರೀಕ್ಷಾ ವರದಿ ನೆಗೆಟಿವ್

ಚಿಕ್ಕಬಳ್ಳಾಪುರ, ನವೆಂಬರ್​​​​ 16: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಯಲ್ಲಿ ಝೀಕಾ ವೈರಸ್  ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ 56 ಜನರ ರಕ್ತದ ಪರೀಕ್ಷಾ ವರದಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಸೇರಿದ್ದು ನೆಗೆಟಿವ್ ಇದೆ. ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್‌ ವೈರಾಲಜಿಯಿಂದ ವರದಿ ನೀಡಲಾಗಿದೆ

ಚಿಕ್ಕಬಳ್ಳಾಪುರ ಡಿಹೆಚ್‌ಒ ಎಸ್.ಎಸ್.ಮಹೇಶ್‍ಕುಮಾರ್​ ಪ್ರತಿಕ್ರಿಯಿಸಿದ್ದು, ಅ.26ರಂದು ಗ್ರಾಮದಲ್ಲಿ ಕೇವಲ ಒಂದು ಸೊಳ್ಳೆಯಲ್ಲಿ ವೈರಸ್ ಪತ್ತೆಯಾಗಿತ್ತು. ಝೀಕಾ ವೈರಸ್ ಪತ್ತೆ ಹಿನ್ನೆಲೆಯಲ್ಲಿ ಟೆಸ್ಟ್‌ಗೆ ರಕ್ತದ ಸ್ಯಾಂಪಲ್ ಕಳಿಸಲಾಗಿತ್ತು. ಗ್ರಾಮದಲ್ಲಿ 11 ಸ್ಥಳಗಳಲ್ಲಿ ಸಂಗ್ರಹಿಸಿದ್ದ ಸೊಳ್ಳೆಗಳ ರಕ್ತದ ಸ್ಯಾಂಪಲ್ ಹಾಗೂ ತಲಕಾಯಲಬೆಟ್ಟದಲ್ಲಿ 56 ಜನರ ರಕ್ತದ ಸ್ಯಾಂಪಲ್ ಟೆಸ್ಟ್‌ಗೆ ಕಳಿಸಲಾಗಿತ್ತು. ಸೊಳ್ಳೆಗಳಿಗೂ ಹಾಗೂ 56 ಜನರಿಗೂ ಯಾವುದೇ ಸೋಂಕು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.