ಹಂಪ್ ಮೇಲೆ ಹತ್ತಿಎದ್ದುನಿಂತ ಲಾರಿ ಮುಂಭಾಗ ಹೊನ್ನಾವರದ ಗೇರುಸೊಪ್ಪ ವೃತ್ತದ ಸಮೀಪ ನಡೆದ ಘಟನೆ

ಹೊನ್ನಾವರ : ಪಟ್ಟಣದ ಗೇರುಸೊಪ್ಪ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ಸರಕು ತುಂಬಿದ ಲಾರಿ ಹಂಪ್ ಮೇಲೆ ಹತ್ತಿ ಲಾರಿ ಮುಂಭಾಗ ಎದ್ದುನಿಂತ ಘಟನೆ ನಡೆದಿದೆ. ಲಾರಿಯಲ್ಲಿ ಕಬ್ಬಿಣದ ಪರಿಕರಗಳಿರುವ ಬಗ್ಗೆ ಮಾಹಿತಿ ಲಭಿಸಿದೆ‌.ಕುಮಟಾ ಮಾರ್ಗದಿಂದ ಮಂಗಳೂರು ಕಡೆಗೆ ಬಾರಿ ಗಾತ್ರದ ಸರಕು ತುಂಬಿ ಸಂಚರಿಸುತ್ತಿದ್ದ ವಾಹನ,ರಸ್ತೆ ಹಂಪ್ ದಾಟುವಾಗ ಘಟನೆ ನಡೆದಿದೆ. ಘಟನೆ ನೋಡಿದ‌ ಜನತೆ ಒಂದುಕ್ಷಣ ಬೆರಗಾದರು.