ಎಕೆ ಸುಬ್ಬಯ್ಯದಿಂದ ಬಿವೈ ವಿಜಯೇಂದ್ರ ವರೆಗೆ: ಕರ್ನಾಟಕ ಬಿಜೆಪಿ ಅಧ್ಯಕ್ಷರ ಪಟ್ಟಿ ಇಲ್ಲಿದೆ

ಬೆಂಗಳೂರು, (ನವೆಂಬರ್ 15): ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿವೈ ವಿಜಯೇಂದ್ರ  ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಅಧಿಕೃತವಾಗಿ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಬಿಜೆಪಿಯಲ್ಲೀಗ ಯುವ ಹವಾ ಶುರುವಾಗಿದೆ. ಅಲ್ಲದೇ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ಕಡೆಗೆ ಕೊಂಡೊಯ್ಯಲು ಹೆಗಲು ಕೊಟ್ಟಿದ್ದಾರೆ. ಇನ್ನು ಇಲ್ಲಿಯವರೆ ಕರ್ನಾಟಕ ಬಿಜೆಪಿಯ ಹೊಣೆಯನ್ನು ಯಾರೆಲ್ಲಾ ಹೊತ್ತೊಂಡಿದ್ದಾರೆ ಎನ್ನುವ ವಿವರ ಈ ಕೆಳಗಿನಂತಿದೆ.

1980ರಲ್ಲಿ ಎ.ಕೆ ಸುಬ್ಬಯ್ಯ ಅವರು ಕರ್ನಾಟಕ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಬಳಿಕ ಬಿ.ಬಿ ಶಿವಪ್ಪ , ಬಿ.ಎಸ್.‌ ಯಡಿಯೂರಪ್ಪ, ಕೆ.ಎಸ್‌. ಈಶ್ವರಪ್ಪ ಸೇರಿದಂತೆ ಹಲವರು ರಾಜ್ಯಾಧ್ಯಕ್ಷರಾಗಿ ಬಿಜೆಪಿಗೆ ದುಡಿದಿದ್ದಾರೆ. ಬಿಜೆಪಿ ಕರ್ನಾಟಕದಲ್ಲಿ ಈ ಮಟ್ಟಕ್ಕೆ ಬೆಳೆದು ನಿಲ್ಲುವಲ್ಲಿ ಯಡಿಯೂರಪ್ಪನವರ ಪಾತ್ರ ಬಹಳ ದೊಡ್ಡದಿದೆ.

988ರಲ್ಲಿ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾಗಿದ್ದರು. ಹಾಗೇ 1998 ಮತ್ತು 2016ರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದರು. ಇದರೊಂದಿಗೆ ಯಡಿಯೂರಪ್ಪ ಒಟ್ಟು ಮೂರು ಬಾರಿ ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿದ್ದರು. ಇನ್ನು ಕೆಎಸ್ ಈಶ್ವರಪ್ಪ 1993 ಹಾಗೂ 2010ರಲ್ಲಿ ಎರಡೂ ಬಾರಿ ರಾಜ್ಯಾಧ್ಯಕ್ಷರಾಗಿದ್ದರು.

ಬಿಜೆಪಿಯ ಈ ಹಿಂದಿನ ರಾಜ್ಯಾದ್ಯಕ್ಷರು ಯಾರು?

1 ಎ.ಕೆ. ಸುಬ್ಬಯ್ಯ: 1980 ರಿಂದ 1983 (3 ವರ್ಷ) 2 ಬಿ.ಬಿ. ಶಿವಪ್ಪ: 1983-1988 (5 ವರ್ಷ) 3 ಬಿ.ಎಸ್.‌ ಯಡಿಯೂರಪ್ಪ: 1988-1991 (3 ವರ್ಷ) 4 ಕೆ.ಎಸ್.‌ ಈಶ್ವರಪ್ಪ: 1993-1998 (5 ವರ್ಷ) 5 ಬಿ.ಎಸ್.‌ ಯಡಿಯೂರಪ್ಪ: 1998-1999 (1 ವರ್ಷ) 6 ಬಸವರಾಜ ಪಾಟೀಲ್‌ ಸೇಡಂಳ 2000- 2003 (3 ವರ್ಷ) 7 ಅನಂತ್‌ ಕುಮಾರ್: 2003- 2004 (1 ವರ್ಷ) 8 ಜಗದೀಶ್‌ ಶೆಟ್ಟರ್: 2004-2006(2 ವರ್ಷ) 9 ಡಿ.ವಿ. ಸದಾನಂದ ಗೌಡ: 2006-2010 (4 ವರ್ಷ) 10 ಕೆ.ಎಸ್.‌ ಈಶ್ವರಪ್ಪ: 2010-2013 (3 ವರ್ಷ 52 ದಿನ) 11 ಪ್ರಲ್ಹಾದ್‌ ಜೋಶಿ-2013-2016 (3 ವರ್ಷ) 12 ಬಿ.ಎಸ್.‌ ಯಡಿಯೂರಪ್ಪ: 2016-2019 (3 ವರ್ಷ) 13 ನಳಿನ್‌ ಕುಮಾರ್‌ ಕಟೀಲ್: 2019- (4 ವರ್ಷ) 14 ಬಿ.ವೈ. ವಿಜಯೇಂದ್ರ: 2023 (ನ. 15) ಹಾಲಿ