ಹೊನ್ನಾವರದಲ್ಲಿ ಅಂತಿಮ ವಿದಾಯ ಸಹನೀಯವಾಗಿಸಲು ಶ್ರದ್ದಾಂಜಲಿ ವಾಹನ – 9ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಯ್ತು ಮುಕ್ತಿ ವಾಹನ

ಹೊನ್ನಾವರ : ಆ ಕುಟುಂಬ ಹೆದ್ದಾರಿ ಪಕ್ಕದ ಗೂಡಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ದಿನವಿಡಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಇವರ ಕಣ್ಣಿಗೆ ಪ್ರತಿನಿತ್ಯ ಹೆದ್ದಾರಿಯಲ್ಲಿ, ಚಾಪೆ, ವಸ್ತಗಳಿಂದ ಶವಗಳನ್ನು ಕಟ್ಟಿಕೊಂಡು ಹೋಗೋದು ಕಾಣಿಸ್ತಿತ್ತು. ಹೀಗಾಗಿ ಸತ್ತವರ ವಿದಾಯವನ್ನು ಕುಟುಂಬದವರಿಗೆ ಸಹನೀಯವಾಗಿಸಲು ತಮ್ಮ ಸ್ವಂತ ಉಳಿತಾಯದಿಂದ ಶ್ರದ್ಧಾಂಜಲಿ ವಾಹನವನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡಿದ್ದಾರೆ…

ಆ ಕುಟುಂಬ ಹೆದ್ದಾರಿ ಪಕ್ಕದ ಗೂಡಂಗಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ದಿನವಿಡಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಇವರ ಕಣ್ಣಿಗೆ ಪ್ರತಿನಿತ್ಯ ಹೆದ್ದಾರಿಯಲ್ಲಿ, ಚಾಪೆ, ವಸ್ತಗಳಿಂದ ಶವಗಳನ್ನು ಕಟ್ಟಿಕೊಂಡು ಹೋಗೋದು ಕಾಣಿಸ್ತಿತ್ತು. ಹೀಗಾಗಿ ಸತ್ತವರ ವಿದಾಯವನ್ನು ಕುಟುಂಬದವರಿಗೆ ಸಹನೀಯವಾಗಿಸಲು ತಮ್ಮ ಸ್ವಂತ ಉಳಿತಾಯದಿಂದ 9 ಲಕ್ಷ ರೂಪಾಯಿ ವೆಚ್ಚದ ಶ್ರದ್ಧಾಂಜಲಿ ವಾಹನವನ್ನು ಸಾರ್ವಜನಿಕರಿಗೆ ಕೊಡುಗೆಯಾಗಿ ನೀಡಿದ್ದಾರೆ…

ಈ ದೃಶ್ಯದಲ್ಲಿ ಕಾಣ್ತಿರೋ ಇವರ ಹೆಸರು ಅಶೋಕ ಜಾದೂಗಾರ.. ಅಶೋಕ್‌, ಜಾದೂರಾರರಾಗಿ ಪ್ರಸಿದ್ದ ಹೊಂದಿದ್ದು, ಶಾಲೆ, ಕಾಲೇಜು, ಜಾತ್ರೆಗಳಲ್ಲಿ ಜಾದೂ ಪ್ರದರ್ಶನ ಮಾಡಿ ಜೀವನ ನಿರ್ವಹಣೆ ಮಾಡ್ತಿದ್ದಾರೆ. ಬಿಡುವಿನಲ್ಲಿ ಹೆದ್ದಾರಿ ಪಕ್ಕದಲ್ಲಿ ಗೂಡಂಗಡಿ ಇಟ್ಟುಕೊಂಡು ಗೋಬಿ ಮಂಚೂರಿ, ಬಜೆ, ಕಬ್ಬಿನಹಾಲು ಮಾರಾಟ ಮಾಡಿ ಜೀವನ ಸಾಗಿಸ್ತಿದ್ದಾರೆ. ಪತಿಯ ಜೊತೆಗೆ ಪತ್ನಿ ಶೈಲಾ ಮತ್ತು ಮಗ ಶ್ರೀರಾಮ ಜಾದೂಗಾರ ಕೂಡ ಸದಾ ಜೊತೆಗಿದ್ದು, ಕುಟುಂಬ ನಿರ್ವಹಣೆ ಮಾಡ್ತಾ ಸುಂದರ ಬದುಕು ನಡೆಸ್ತಿದ್ದಾರೆ..

ದಿನವಿಡಿ ಅಂಗಡಿಯಲ್ಲಿ ಕೆಲಸ ಮಾಡುವಾಗ ಹೆದ್ದಾರಿಯಲ್ಲಿ ಅದೆಷ್ಟೋ ಶವಗಳು ಅಂಬ್ಯೂಲೆನ್ಸ್ ಒಳಗೆ ಸಾಗಿಸಲ್ಪಡುತ್ತಿದ್ದವು, ಆಸ್ಪತ್ರೆಯಿಂದ ಮರಳಿ ಬರುತ್ತಿದ್ದವು. ಚಾಪೆ, ವಸ್ತ್ರಗಳಿಂದ ಮೂಟೆ ಕಟ್ಟಿಕೊಂಡು ಬರುವ ಶವಗಳನ್ನು ಕಂಡಾಗ ಇಂತಹ ಶವಗಳು ಒಂದು ಕಾಲದಲ್ಲಿ ಸಂಭ್ರಮದಿಂದ ಜೀವಿಸಿದ್ದವು. ಇವರ ವಿದಾಯವನ್ನು ಕುಟುಂಬಕ್ಕೆ ಸಹನೀಯವಾಗಿಸಬೇಕು ಅನ್ನೋ ಉದ್ದೇಶದಿಂದ ಶೃದ್ಧಾಂಜಲಿ ಎಂಬ ವಾಹನವನ್ನು ಈ ಕುಟುಂಬದ ಸದಸ್ಯರು ಸ್ವಂತ ಉಳಿತಾಯದ ಹಣದಲ್ಲಿ 9ಲಕ್ಷ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದಾರೆ.

ಪಾರದರ್ಶಕ ಗಾಜುಗಳಿಂದ ವಾಹನವನ್ನು ಸಜ್ಜುಗೊಳಿಸಲಾಗಿದ್ದು, ಒಳಗೆ ಶವ ಇರಿಸಲು ಗಾಜಿನ ಪೆಟ್ಟಿಗೆ ಇದೆ. ಬಂಧುಗಳಿಗೆ ಕೂರಲು ವ್ಯವಸ್ಥೆ ಇದೆ. ರಾಮ್ ರಾಮ್ ಸತ್ಯ ಹೈ ಭಜನೆ ಕೇಳಿಸಲು ಧ್ವನಿವರ್ಧಕವಿದೆ. ವಾಹನದಲ್ಲಿ ಬಟ್ಟೆ, ಮಡಿಕೆ, ಬಿದಿರಿನ ವ್ಯವಸ್ಥೆಯಿದೆ. ಹೂವಿನಿಂದ ಅಲಂಕರಿಸಲು ವ್ಯವಸ್ಥೆ ಮಾಡಲಾಗಿದ್ದು, ರಾತ್ರಿ ಒಯ್ಯಲು ಒಳಗಡೆ ಬೆಳಕಿನ ಮತ್ತು ಫ್ಯಾನಿನ ವ್ಯವಸ್ಥೆ ಇದೆ. ದೊಡ್ಡ ದೊಡ್ಡ ಶಹರಗಳಲ್ಲಿ ಇರುವ ಈ ವ್ಯವಸ್ಥೆ ನಮ್ಮೂರಿನಲ್ಲಿಯೂ ಇರಲಿ ಎಂದು ಮಾಡಿದ್ದೇನೆ ಅಂತಾರೆ ಅಶೋಕ ಜಾದುಗಾರ…

ಲಾಭದ ಆಸೆಗಾಗಿ ಇದನ್ನು ನಿರ್ಮಿಸಿಲ್ಲ. ಮನಸ್ಸಿದ್ದವರು ನಿರ್ವಹಣೆ ಮತ್ತು ಇಂಧನದ ವೆಚ್ಚವನ್ನು ಕೊಡಬಹುದು. ದಾನಿಗಳು ಸಹಾಯ ಮಾಡಬಹುದು ಅನ್ನುತ್ತಾರೆ. ಅಶೋಕ ಜಾದೂಗಾರ ಪುತ್ರ ಶ್ರೀರಾಮ್…

ಸಮಾಜಕ್ಕೆ ಶ್ರೀಸಾಮಾನ್ಯನ ಈ ಅಸಾಮಾನ್ಯ ಕೊಡುಗೆ ನವೆಂಬರ್ 10 ರಂದು ಶುಕ್ರವಾರ ಶರಾವತಿ ಸರ್ಕಲ್ ಬಳಿ ಇರುವ ಪಟ್ಟಣ ಪಂಚಾಯತ ಆವಾರದಲ್ಲಿ ಗಣ್ಯರಿಂದ ಲೋಕಾರ್ಪಣೆಯಾಗಲಿದೆ. ವಾಹನದ ಒಂದು ಬದಿಗೆ ವೈಕುಂಠ ಯಾತ್ರೆ ಮತ್ತು ಹಿಂಬದಿಗೆ ಸ್ವರ್ಗದ ಬಾಗಿಲು ಎಂದು ಬರೆಯಾಗಿದೆ. ವಾಹನ ಬೇಕಾದವರು ದೂರವಾಣಿ 9008450499ಗೆ ಕರೆ ಮಾಡಿ ಸಂಪರ್ಕಿಸಬಹುದಾಗಿದೆ. ಒಟ್ನಲ್ಲಿ ದುಡಿದು ಜೀವನ ಸಾಗಿಸುತ್ತಿರುವ ಈ ಅಶೋಕ ಜಾದೂಗಾರ ಕುಟುಂಬದ ಈ ಸಾಮಾಜಿಕ ಕಾಳಜಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ..
ಪ್ಲೋ..ಎಂಡ್…