ಸಿದ್ದಾಪುರ: ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಭುವನೇಶ್ವರಿ ಸನ್ನಿಧಿಗೆ ಬಂದರೆ ಮನಕ್ಕೆ ಶಾಂತಿ ದೊರೆಯುವುದರ ಜೊತೆಗೆ ಜಾಗೃತ ಮನೋಭಾವನೆ ಬೆಳೆಯುತ್ತದೆ ಎಂದು ತಹಶೀಲ್ದಾರ ಮಧುಸೂದನ ಆರ್ ಕುಲಕರ್ಣಿ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಮಾತೃ ವಂದನಾ ಸಮಿತಿ, ಭುವನೇಶ್ವರಿ ದೇವಾಲಯ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಮಾತೃ ವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ವಾನ್ ಗಂಗಾಧರ ಭಟ್ಟ, ಗೋವಿಂದ ಹರಗಿ, ಡಾ, ಪದ್ಮಶ್ರೀ ಹೆಗಡೆ ಅವರಿಗೆ ಶ್ರೀಮಾತಾ ಅನುಗ್ರಹ ಗೌರವ ಸಮ್ಮಾನ ನೀಡಿ ಗೌರವಿಸಲಾಯಿತು.
ತಾಲ್ಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದ್ವಿತೀಯ ಮತ್ತು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾದ
ಸ್ಪಂದನಾ ಚಂದ್ರಕಾಂತ ಮಡಿವಾಳ, ತುಷಾರ ಘನಶ್ಯಾಮ ಪಟೇಲ, ದೀಪ್ತಿ ವಿನಾಯಕ ಶೇಟ್, ಚಿನ್ಮಯ ಕೆ ಎಲ್ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.