ಎತ್ತರ ಜಿಗಿತ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಚಿಕ್ಕೊಳ್ಳಿ ವಿದ್ಯಾರ್ಥಿನಿ

ಹೊನ್ನಾವರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕೊಳ್ಳಿಯ ವಿದ್ಯಾರ್ಥಿನಿ, ಇವಳು ಇತ್ತೀಚೆಗೆ ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಎತ್ತರ ಜಿಗಿತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು,ಸಾಧಕ ಬಾಲಕಿಗೆ ಗ್ರಾಮದಲ್ಲಿ ಸನ್ಮಾನಿಸಿದರು.

ಕ್ರೀಡೆಯಲ್ಲಿ ಸಾಧನೆಗೈದ ಬಾಲಕಿ ಸಿಂಚನಾ ಬಾಲಚಂದ್ರ ನಾಯ್ಕ, ಜನಕಡ್ಕಲ್ ಗ್ರಾಮದ ದರ್ಬೇಜಡ್ಡಿ ಮಜರೆಯ ದೂಪಡಕೊಡ್ಲು ನಿವಾಸಿ ಬಾಲಚಂದ್ರ ನಾಯ್ಕ, ವೀಣಾ ನಾಯ್ಕ ದಂಪತಿಯ ಪುತ್ರಿ. ಈಕೆ ಅಪ್ಪಟ ಗ್ರಾಮೀಣ ಪ್ರತಿಭೆ. ಇವಳ ಸಾಧನೆಯನ್ನು ಗುರುತಿಸಿ ಚಿಕ್ಕೊಳ್ಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಊರ ನಾಗರಿಕರು, ಎಸ್. ಡಿ. ಎಮ್. ಸಿ., ಶಿಕ್ಷಕ ವೃಂದ, ಶಿಕ್ಷಣ ಇಲಾಖೆ ಹೊನ್ನಾವರ ಹಾಗೂ ಗ್ರಾಮ ಪಂಚಾಯತ್ ಚಿಕ್ಕನಕೊಡ ಜಂಟಿಯಾಗಿ “ಅಭಿನಂದನಾ ಹಾಗೂ ಸನ್ಮಾನ ಸಮಾರಂಭ” ವನ್ನು ಏರ್ಪಡಿಸಿತ್ತು. ಸತತ ಎರಡನೇ ವರ್ಷದ ರಾಜ್ಯಮಟ್ಟದ ಸಾಧನೆಯ ಹಿರಿಮೆಯ ಕಿರೀಟವನ್ನು ,
ತಾಲೂಕಿನ ಅದರಲ್ಲೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಾದ ಚಿಕ್ಕೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಮುಡಿಗೇರಿಸಿ ಕೊಂಡಿದೆ. ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲೆಯನ್ನು ಪ್ರತಿನಿಧಿಸಲು ಹೋಗುವ ಕ್ರೀಡಾ ಪ್ರತಿಭೆ ಸಿಂಚನಾ ನಾಯ್ಕಳನ್ನು ಸನ್ಮಾನಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ಯಾಮಲಾ ಜಗದೀಶ ನಾಯ್ಕ ಮಾತನಾಡಿ ಪ್ರತಿಯೊಬ್ಬರಲ್ಲು ಒಂದೊಂದು ರೀತಿಯ ಪ್ರತಿಭೆ ಇರುತ್ತದೆ.ಅದನ್ನು ಗುರುತಿಸಿ,ಬೆಳಕಿಗೆ ತರುವ ಕಾರ್ಯ ಆಗಬೇಕು.ಇಂತಹ ಮಹತ್ಕಾರ್ಯವನ್ನು ಪಾಲಕ-ಪೋಷಕರು,ಶಿಕ್ಷಕರಿಂದಾಗಬೇಕು.ಸಾಧನೆಗೈದ ಪ್ರತಿಭೆಗಳ ಪ್ರೋತ್ಸಾಹಿಸುವ‌ ಕಾರ್ಯ ಗ್ರಾಮಸ್ಥರಿಂದಾಗಬೇಕು ಎಂದರು.
ಬೈಟ್ :ಶ್ಯಾಮಲಾ ಜಗದೀಶ ನಾಯ್ಕ

ವೇದಿಕೆಯಲ್ಲಿದ್ದ ಸರ್ವ ಗಣ್ಯರೂ ಪ್ರತಿಭೆಯನ್ನು ಅಭಿನಂದಿಸಿ,ರಾಜ್ಯಮಟ್ಟದಲ್ಲಿ ಗೆಲುವು ಸಾಧಿಸುವಂತೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ, ಗ್ರಾಮ ಪಂಚಾಯತ್ ವತಿಯಿಂದ ಕ್ರೀಡಾ ಸಾಧಕಿಗೆ ನೀಡಲಾದ ಪ್ರೋತ್ಸಾಹ ಧನವನ್ನು ಗ್ರಾಮ ಪಂಚಾಯತ ಅಧ್ಯಕ್ಷೆ ಶ್ಯಾಮಲಾ ನಾಯ್ಕ ನೀಡಿದರು. ವೇದಿಕೆಯಲ್ಲಿದ್ದ ಗಣ್ಯರೂ ಸಹ ಪ್ರೋತ್ಸಾಹ ಧನವನ್ನು ಕ್ರೀಡಾಭಿಮಾನದಿಂದ ನೀಡಿ ಹಾರೈ ಸಿದರು.