ಹೊನ್ನಾವರ:”ಪರಿವರ್ತನೆ ಜಗದ ನಿಯಮ. ಬದಲಾವಣೆಗೆ ತಕ್ಕಂತೆ ತಮ್ಮನ್ನು ತಾವು ತೊಡಿಸಿಕೊಳ್ಳಬೇಕು” ಎಂದು ಉಮೇಶ ಹೆಗಡೆಯವರು ನುಡಿದರು.
ಅವರು ಅವರು ಹೊನ್ನಾವರ ತಾಲೂಕಿನ ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಅತಿಥಿಯಾಗಿ ಆಗಮಿಸಿದ್ದ ವಿ ಜಿ ಹೆಗಡೆ ಗುಡ್ಗೆಯವರು ಮಾತನಾಡಿ ಸತ್ಯ, ಧರ್ಮ, ನ್ಯಾಯ, ಸತ್ಯಾಗ್ರಹ, ಅಹಿಂಸೆ, ಸ್ತ್ರಿ ಸಮಾನತೆ ಇಂತಹ ತಪ್ಪುಗಳನ್ನು ಜಗತ್ತಿಗೆ ನೀಡಿದ ಕೀರ್ತಿ ಮಹಾತ್ಮ ಗಾಂಧೀಜಿ ಅವರಿಗೆ ಸಲ್ಲುತ್ತದೆ ಎಂದರು. ಆಡಳಿತ ಅಧಿಕಾರಿ ಎಂ ಎಸ್ ಹೆಗಡೆ ಗುಣವಂತೆಯವರು”ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕುರಿತು ಮಾಹಿತಿಯನ್ನು ನೀಡಿದರು. ಮುಖ್ಯ ಶಿಕ್ಷಕಿ ವೈಲೆಟ್ ಫರ್ನಾಂಡಿಸ್ ,ಶಿಕ್ಷಕಿ ರಮ್ಯಾ ಹೆಗಡೆ,ಪ್ರತಿಮ, ವನಿತ ಹಾಗೂ ರೇಷ್ಮಾ ಜೋಗಳೆಕರ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಸ್ವಚ್ಛತಾ ಕಾರ್ಯಕ್ರಮ ಜರುಗಿತು