ಶತಾಯುಷಿ ಮಹಾದೇವ್ ನಾಯ್ಕ ಅವರಿಗೆ ತಾಲೂಕು ಆಡಳಿತದ ಪರವಾಗಿ ಸನ್ಮಾನ

ಜೋಯಿಡಾ : ತಾಲೂಕಿನ ಚಾಪೋಲಿ ಕಳಸಾಯಿ ಗ್ರಾಮದಲ್ಲಿ ಭಾಗ ಸಂಖ್ಯೆ 45, ಕ್ರ.ಸಂ 397ರಲ್ಲಿ ಮತದಾರರಾಗಿರುವ ಶತಾಯುಷಿ 103 ವರ್ಷದ ಮಹಾದೇವ ನಾಯ್ಕ‌ಅವರಿಗೆ ಇಂದು ಭಾನುವಾರ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ನೇತೃತ್ವದಲ್ಲಿ ತಾಲೂಕು ಆಡಳಿತದ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಶೈಲೇಶ್ ಪರಮಾನಂದವರು ಶತಾಯುಷಿ ಮಹದೇವ್ ನಾಯ್ಕ ಅವರ ಆರೋಗ್ಯ ಮತ್ತು ಜೀವನ ಕ್ರಮ ನಮಗೆಲ್ಲ ಸ್ಪೂರ್ತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರರುಗಳಾದ ಸುರೇಶ ಒಕುಂದ, ಗಣಪತಿ ಮೇತ್ರಿ ಹಾಗೂ ಪ್ರಭಾರ ಕಂದಾಯ ನಿರೀಕ್ಷಕ ಮಲ್ಲಪ್ಪ ಗಚ್ಚಿನ ಮನೆ ಮತ್ತು ಮಹಾದೇವ ನಾಯ್ಕ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.