ದಾಂಡೇಲಿ : ಭೀಮ್ ಆರ್ಮಿ ಸಂಘಟನೆಯ ದಾಂಡೇಲಿ ತಾಲೂಕು ಘಟಕದ ರಚನೆ ಮತ್ತು ನೂತನ ದಾಂಡೇಲಿ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಪ್ರವಾಸಿ ಮಂದಿರದಲ್ಲಿ ಇಂದು ಜರುಗಿತು.
ಭೀಮ್ ಆರ್ಮಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಮೇಘರಾಜ್.ಆರ್.ಮೇತ್ರಿಯವರ ಅಧ್ಯಕ್ಷತೆಯಲ್ಲಿ ದಾಂಡೇಲಿ ತಾಲೂಕು ಘಟಕವನ್ನ ರಚಿಸಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಭೀಮ್ ಆರ್ಮಿ ದಾಂಡೇಲಿ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ದುರ್ಗಾನಂದ.ಎನ್.ನೇತ್ರೇಕರ್, ತಾಲ್ಲೂಕು ಅಧ್ಯಕ್ಷರಾಗಿ ಮಾಜಿ ನಗರ ಸಭಾ ಸದಸ್ಯರಾದ ಸತೀಶ್.ಬಿ.ನಾಯ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರುಗಳನ್ನಾಗಿ ಅಶೋಕ್ ಕುಮಾರ್ ಲಮಾಣಿ, ರೋಹಿತ್ ತಳವಾರ್, ಕರ್ಣಮ್ಮ ತೋಡೆಟ್ಟಿ, ನೀಲಾ.ಎಸ್.ಮಾದರ್, ವೀಣಾ.ಆರ್.ಗಜಾಕೋಶ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯ್.ಎಸ್.ಚೌವ್ಹಾಣ್, ಕಾರ್ಯದರ್ಶಿಯಾಗಿ ಮುಜುಬಾ ಚಬ್ಬಿ, ಸಂಘಟನಾ ಕಾರ್ಯದರ್ಶಿಗಳಾಗಿ ರಾಜಶೇಖರ್ ನಿಂಬಾಳ್ಕರ್, ಮೇರಿ ಮುರಾರಿ, ಸಂಗೀತ ಅಮರೇ, ಉಮೇಶ್ ಮೆಲಗಿರಿ, ಶೈಜಾದಿ ಕುಲಶಾಪುರ, ಶಿವಾಜಿ ರಾಥೋಡ್, ಸಂಯೋಜಕರಾಗಿ ರವಿಕುಮಾರ್ ಬಡಿಗೇರ್, ರಮೇಶ್ ಬಾಬು ಚಂದಾವರ, ಪದ್ಮ ಕುರುಬರ, ಲೈಸಮ್ಮ ಬಂದೇಲಾ ಮತ್ತು ಸಂಚಾಲಕರಾಗಿ ಭಾಗ್ಯ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹೂವಪ್ಪ ಖಾನಪೇಟ, ದಿಲ್ ಶಾದ್ ಸವಣೂರು, ರಿಜ್ವಾನಾ ಬೆಳ್ಳೋಡಿ, ಅಜಯ್ ಎಸ್ ಶಿರೋಡ್ಕರ್, ಸಂತೋಷ್.ಬಿ. ಬೋರ್ಕರ್, ರಾಜೇಶ್ ರೇವಣಕರ್, ಚಂದ್ರು ಜ್ಯೋತಿಬಾ ಚೌಹಾನ್, ಸಂದೀಪ್ ರೇವಣಕರ್, ಮುಸ್ತಾಕ್ ಅಹಮದ್ ಖಲಾಶಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸಮಿತಿ ಸದಸ್ಯರನ್ನಾಗಿ ಪ್ರಮೋದ್ ಡಿ ರೇವಣಕರ್ ಮತ್ತು ಧರ್ಮಣ್ಣ ಬಿ ಭಜಂತ್ರಿ ಅವರನ್ನು ಆಯ್ಕೆ ಮಾಡಲಾಯಿತು.