ಯಲ್ಲಾಪುರ ಪಟ್ಟಣದ ತಟಗಾರ ಕ್ರಾಸ್ ಸಮೀಪ, ತಟಗಾರ-ಹುಟಕಮನೆ ಮುಖ್ಯ ರಸ್ತೆಯ ಅಂಚಿನಲ್ಲಿ ಇತ್ತೀಚೆಗೆ ಅನಧಿಕೃತವಾಗಿ ಕೆಲವರು ಮೀನು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಟಗಾರ್,ಹುಟಕಮನೆ,ಶೀಗೆಪಾಲ ಗ್ರಾಮಸ್ಥರು ಬುಧವಾರ ಶಾಸಕ ಶಿವರಾಮ ಹೆಬ್ಬಾರ್ ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮೀನು ಮಾರಾಟಕ್ಕೆಂದೇ ಪಟ್ಟಣದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ಇದ್ದರೂ ಕೆಲವರು ತಟಗಾರ ಮುಖ್ಯ ರಸ್ತೆಯ ಅಂಚಿನಲ್ಲಿ ಅನಧಿಕೃತವಾಗಿ ಮೀನು ಮಾರಾಟ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರಸ್ತೆಯಲ್ಲಿ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತಿದೆ. ದುರ್ವಾಸನೆಯಿಂದ ಸಮಸ್ಯೆಯಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಗ್ರಾಮಸ್ಥರಿಂದ ಮನವಿಯನ್ನು ಸ್ವೀಕರಿಸಿದ ಶಾಸಕ ಶಿವರಾಮ ಹೆಬ್ಬಾರ್ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಪಟ್ಟಣ ಪಂಚಾಯತಿ ಎಂಜನೀಯರ್ ಹೇಮಚಂದ್ರ ನಾಯ್ಕ, ಸಮೂಹ ಸಂಪನ್ಮೂಲ ಅಧಿಕಾರಿ ಹೇಮಾವತಿ ಭಟ್ಟ, ಗ್ರಾಮಸ್ಥರಾದ ನರಸಿಂಹ ಭಟ್ಟ ಬೋಳ್ಪಾಲು, ಅನಂತ ಭಟ್ಟ, ನಾಗೇಶ ಭಟ್ಟ, ವಿಶ್ವನಾಥ ಭಟ್ಟ, ಮಂಜುನಾಥ ಭಟ್ಟ, ಅನಂತ ಗೋ ಭಟ್ಟ, ಅನಂತ ತಿಮ್ಮಣ್ಣ ಭಟ್ಟ, ಮಂಜುನಾಥ ಭಟ್ಟ ಕೊಂಬೆಪಾಲು, ಕೃಷ್ಣ ಭಟ್ಟ ಬದ್ನೆಪಾಲು ಮುಂತಾದವರು ಇದ್ದರು