ಅಂಕೋಲಾ: ಚಲಿಸುತ್ತಿದ್ದ ರೈಲಿನಲ್ಲಿ ಎಟಿಎಂ ಕಾರ್ಡ್, ಪಾನ್ ಕಾರ್ಡ್, ಮೊಬೈಲ್, 10 ಲಕ್ಷ ರೂಪಾಯಿ ಮೌಲ್ಯದ ಡಿಡಿ, ಮನೆಯ ದಾಖಲೆಗಳನ್ನು ಒಳಗೊಂಡ ವ್ಯಾನಿಟಿ ಬ್ಯಾಗ್ ಸಮೇತ ಎಗರಿಸಿದ ಘಟನೆ ತಾಲ್ಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಗುಜರಾತಿನ ಅಹಮದಾಬಾದನ ಮೂಲದ ಮನೋಜ್ ನಾಯರ್ ಪೋರಬಂದರ್ ಎಕ್ಷಪ್ರೆಸ್ KCVL -20909 ರೈಲಿನಲ್ಲಿ ಸ್ಲೀಪರ್ ಕೋಚ್ ವಿಭಾಗದಲ್ಲಿ ಆಗಸ್ಟ್ 14 ರಂದು ಪ್ರಯಾಣಿಸುತ್ತಿದ್ದರು. ಮಧ್ಯರಾತ್ರಿ ಒಂದು ಗಂಟೆಗೆ ರೈಲು ಅಂಕೋಲಾ ಮತ್ತು ಗೋಕರ್ಣದ ನಡುವೆ ಸಂಚರಿಸುತ್ತಿರುವ ಅವಧಿಯಲ್ಲಿ ಕಳ್ಳರು ಈ ದುಷ್ಕೃತ್ಯ ಗೈದಿದ್ದಾರೆ.
ಈ ಕುರಿತು ಸ್ವತ್ತುಗಳನ್ನು ಕಳೆದುಕೊಂಡ ಮನೋಜ್ ನಾಯರ್ ಕಾರವಾರದ ಕೊಂಕಣ ರೈಲ್ವೆಯ ಆರ್ ಪಿ ಎಫ್ ಕಚೇರಿಯಲ್ಲಿ ದೂರು ಸಲ್ಲಿಸಿದ್ದರು. ಕೊಂಕಣ ರೈಲ್ವೆ ಕಚೇರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಮೂಲಕ ಸಲ್ಲಿಸಿದ ದೂರಿನ ಅನ್ವಯ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ