ಸೆಪ್ಟೆಂಬರ್ 29 ರಂದು ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದು ಸಿದ್ದಾಪುರದಲ್ಲೂ ಬಂದ್ ಗೆ ಬೆಂಬಲ ನೀಡುತ್ತಿದ್ದೇವೆ-ವೀರಭದ್ರ ನಾಯ್ಕ್

ಸಿದ್ದಾಪುರ: ಸೆಪ್ಟೆಂಬರ್ 29 ರಂದು ಸಂಘಟನೆಗಳು ರಾಜ್ಯ ಬಂದ್ ಗೆ ಕರೆ ನೀಡಿದ್ದು ಸಿದ್ದಾಪುರದಲ್ಲೂ ಬಂದ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದು ರೈತ ಮುಖಂಡ ವೀರಭದ್ರ ನಾಯ್ಕ್ ಮಾಹಿತಿ ನೀಡಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾವೇರಿ ನೀರನ್ನು ನಿರಂತರವಾಗಿ ತಮಿಳುನಾಡುಗೆ ಹರಿಬಿಡುವುದನ್ನು ವಿರೋಧಿಸಿ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದೇವೆ ಎಂದರು. ನಾಡದೇವಿ ಹೋರಾಟ ವೇದಿಕೆಯ ಅನಿಲ್ ಕೊಠಾರಿ ಮಾತನಾಡಿ ಅಂದು ಗಂಗಾಮಾತಾ ದೇವಾಲಯದ ಎದುರಿನಿಂದ ಪ್ರತಿಭಟನ ಮೆರವಣಿಗೆ ಹಮ್ಮಿಕೊಂಡಿದ್ದು ರಾಜಮಾರ್ಗ, ಬಿ. ಎಸ್ ಸರ್ಕಲ್ ಮೂಲಕ ತಹಸೀಲ್ದಾರ್ ಕಚೇರಿ ತಲುಪಿ ಅಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ನೀಡುತ್ತೇವೆ ಎಂಟಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡುತ್ತಿವೆ, ಸಾರ್ವಜನಿಕರು, ಅಂಗಡಿ ಮುಂಗಟ್ಟು ಮಾಲಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ರೇವಣ್ಣ, ಹೇಮಂತ್ ನರಮುಂಡಿಗೆ ಉಪಸ್ಥಿತರಿದ್ದರು.