ದಾಂಡೇಲಿ: ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಕು. ಶ್ರದ್ಧಾ ದೀಪಕ ಸಾಮಂತ ಇವಳಿಗೆ ಇವಳ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಾಣಿಕ್ಯ ಪ್ರಕಾಶನ(ರಿ), ಹಾಸನ ರವರು ಕೊಡಮಾಡುವ 2023 ನೇ ಸಾಲಿನ ಸಾಹಿತ್ಯ ಕ್ಷೇತ್ರದ “ಪ್ರತಿಭಾ ಮಾಣಿಕ್ಯ” ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದ್ದಾಳೆ.
ಪ್ರತಿವರ್ಷ ಕೊಡಮಾಡುವಂತೆ ಪ್ರಸಕ್ತ ಸಾಲಿನಲ್ಲಿಯು ಮಾಣಿಕ್ಯ ಪ್ರಕಾಶನದ ಪ್ರಶಸ್ತಿಗಳಿಗೆ ವಿವಿಧ ಕ್ಷೇತ್ರದ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸಾಧಕರನ್ನು ಗುರುತಿಸಲಾಗಿದೆ. ಹಿರಿಯ ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್, ನಾಗರಾಜ್ ದೊಡ್ಡಮನಿ, ಟಿ.ಸತೀಶ್, ಜವರೇಗೌಡ, ಎಚ್.ಎಸ್.ಬಸವರಾಜ್, ಡಾ. ಎಚ್.ಕೆ.ಹಸೀನಾ ಹಾಗೂ ಲತಾಮಣಿ ಎಂ.ಕೆ.ತುರುವೇಕೆರೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸಾಧಕರನ್ನು ಗುರುತಿಸಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಶ್ರದ್ಧಾಳಿಗೆ ರಾಜ್ಯ ಮಟ್ಟದ ಪ್ರಶಸ್ತಿಯ ಗೌರವ ಲಭಿಸಿದೆ.
ಈಕೆ ನಗರದ ಸಮಾಜಸೇವಕರಾದ ದೀಪಕ್ ಸಾಮಂತ್ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಘಟಕಿ ದೀಪಾಲಿ ಸಾಮಂತ್ ದಂಪತಿಗಳ ಸುಪುತ್ರಾಗಿದ್ದಾಳೆ. ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ಶ್ರದ್ಧಾ ದೀಪಕ ಸಾಮಂತಳನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.