ಜನತಾ ಸೊಸೈಟಿಗೆ2.36 ಕೋ. ರೂ. ಲಾಭ ಶೇರುದಾರರಿಗೆ ಶೇ. 8ರಷ್ಟು ಲಾಭಾಂಶ ನೀಡಿಕೆ: ಸಚಿವ ಮಂಕಾಳ ವೈದ್ಯ

ಭಟ್ಕಳ: ದಿ.ಜನತಾ  ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಇದರ 38ನೇ ವಾರ್ಷಿಕ ಮಹಾಸಭೆಯು ಸೊಸೈಟಿಯ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಗರದ ಮುಗಳಿಕೋಡ ಶ್ರೀ ಗೋಪಾಲಕೃಷ್ಣ ಸಭಾ ಭವನದಲ್ಲಿ  ನಡೆಯಿತು.

ಮಹಾಸಭೆಯಲ್ಲಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಸೊಸೈಟಿ ವರದಿಯ ಸಾಲಿನಲ್ಲಿ ರೂ.2.36 ಕೋಟಿ, ನಿವಳ ಲಾಭಗಳಿಸಿದ್ದು, ಶೇರುದಾರರಿಗೆ ಶೇ.8ರಷ್ಟು ಲಾಭಾಂಶ ನೀಡಲು ನಿರ್ಧರಿಸಲಾಗಿದೆ. ಎಂದರು.

ವರದಿಯ ಸಾಲಿನಲ್ಲಿ ಸೊಸೈಟಿಯು ರೂ.9,93:ಕೋಟ, ಶೇರು ಬಂಡವಾಳ, ರೂ.14.83 ಕೋಟಿ, ಕಾಯ್ದಿಟ್ಟ ಮತ್ತು ಇತರೇ ನಿಧಿ, ರೂ.162.93 ಕೋಟಿ ಠೇವಣಿ, ರೂ.1.50 ಕೋಟಿ ವಿನಿಯೋಗ, ಸದಸ್ಯರಿಗೆ ರೂ.198 ಕೋಟಿ ರೂಪಾಯಿ ಸಾಲ ವಿತರಿಸಿದೆ ಎಂದು ಅವರು ಜನತಾ ಸೊಸೈಟಿಯು ಜಿಲ್ಲೆಯಲ್ಲಿ ಜೊಯಿಡಾ ತಾಲೂಕನ್ನು ಹೊರತು ಪಡಿಸಿ ಎಲ್ಲ ತಾಲೂಕುಗಳಲ್ಲಿ ಯಾವುದೇ  ಶಾಖೆ ಹೊಂದುವುದರ ಮೂಲಕ ಜಿಲ್ಲೆಯ ಜನತೆಗೆ ಉತ್ತಮ ಸೇವೆ ನೀಡುತ್ತಿದ್ದೇವೆ ಎಂದರು.

ಆರ್ಥಿಕ ವ್ಯವಹಾರದ ಜೊತೆಗೆ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತರ ಆರ್ಥಿಕ ವ್ಯವಹಾರದ ಜೊತೆಗೆ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೆರವು, ಮನೆ ಕಳೆದುಕೊಂಡವರಿಗೆ ನೆರವು ಸೇರಿದಂತೆ ಸಮಾಜಮುಖಿ ಕಾರ್ಯಕ್ಕೆ ನೆರವು ನೀಡುತ್ತಿದೆ. ಸೊಸೈಟಿಯ ಮಾಡಿಕೊಟ್ಟಿದ್ದೇವೆ ಎಂದರು. ಸಾಲಗಾರರು ಕಟಬಾಕಿ ಮಾಡಿಕೊಳ್ಳದೇ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿ ಸೊಸೈಟಿಯ ಬೆಳವಣಿಗೆಗೆ ಸಹಕಾರ ನೀಡಬೇಕು. ಸೊಸೈಟಿಯಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ಕಾರ್ಯನಿರ್ವಹಣೆ ಆಗುತ್ತಿದ್ದು, ಯಾರಿಗೂ ಆತಂಕ ಬೇಡ ಎಂದು ಹೇಳಿದರು.

ಸೊಸೈಟಿಯ ಪ್ರಕರಣಗಳು ಸ್ಥಳೀಯ ಕೋರ್ಟುಗಳು, ಜಿಲ್ಲಾ ನ್ಯಾಯಾಲಯ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಕೂಡಾ ಇದೆ. ಆದರೆ ಯಾವುದೇ ಸಂದರ್ಭದಲ್ಲಿ ಕೂಡ ಸಾಲಗಾರರು ಬಂದು ತಮ್ಮ ಖಾತೆಯ ಬಾಕಿಯನ್ನು ಮಾತುಕತೆಯ ಮೂಲಕ ತುಂಬಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದ ಅವರು ಯಾವುದೇ ಸಂದರ್ಭದಲ್ಲಿಯೂ ಕೂಡಾ ಸಾಲಗಾರರಿಗೆ ಅನವಶ್ಯಕವಾಗಿ ತೊಂದರೆ ಕೊಡುವ ಕೆಲಸ ಮಾಡುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಬಡ್ಡಿ ಹಣವನ್ನು ತುಂಬಿದರೆ ಸಾಲ ಮರು ಚಾಲನೆ ಮಾಡಿ ಕೊಟ್ಟಿದ್ದೇವೆ ಎಂದರು

ಶೇರುದಾರ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು ಸಮರ್ಪಕವಾಗಿ ಉತ್ತರವನ್ನು ನೀಡಿದರು. ಉಪಾಧ್ಯಕ್ಷ ಪರಮೇಶ್ವರ ದೇವರಿಗೆ ಸ್ವಾಗತಿಸಿದರು. ಪ್ರಭಾರ ಪ್ರಧಾನ ವ್ಯವಸ್ಥಾಪಕ ನಾಗೇಶ ದೇವಡಿಗ ವರದಿ ವಾಚಿಸಿದರು. ನಿರ್ದೇಶಕ ಕೃಷ್ಣಾ ನಾಯ್ಕ ವಂದಿಸಿದರು. ನಿರ್ದೇಶಕರಾದ ನಾಗಪ್ಪ ಪಿ. ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ತಿಮ್ಮಪ್ಪ ನಾಯ್ಕ, ಉಚ್ಚ ರಾಮಚಂದ್ರ ಕಿಣಿ, ವೆಂಕಟ್ರಮಣ ಮೊಗೇರ, ಗೊಯ್ದ ಗೊಂಡ, ಅರ್ಟ ಕೋಪ, ಲಕ್ಷ್ಮೀ ಎಂ, ನಾಯ್ಕ ಉಪಸ್ಥಿತರಿದ್ದರು.