ಯಲ್ಲಾಪುರ: ಯಲ್ಲಾಪುರ ವಿವಿದ್ದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದವು ಕಳೆದ ಸಾಲಿನಲ್ಲಿ ೩೯.೩೯ ಲಕ್ಷರೂ ಲಾಭ ವಾಗಿದೆ
ಎಂದು ಸಂಘದ ಅಧ್ಯಕ್ಷ ನಾಗರಾಜ ಕವಡಿಕೇರಿ ಹೇಳಿದರು.
ಅವರು ಶನಿವಾರ ಸಂಘದ ಮಾಹಿತಿನೀಡಿ, ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಸೆ.೨೫ ರಂದು ಸಂಜೆ ೩.೩೦ ಕ್ಕೆ ಹುಲ್ಲೋರಮನೆ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ. ಸಂಘವು ಉಪಳೇಶ್ವರ, ನಂದೊಳ್ಳಿ ಯಲ್ಲಿ ಶಾಖೆ ಹೊಂದಿದೆ. ಯಲ್ಲಾಪುರ ದಲ್ಲಿ ವಾಣಿಜ್ಯ ಸಂಕೀರ್ಣ ಹೊಂದಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಸಂಘದ ಮೂಲಕ ರೈತರು ವ್ಯವಹಾರ ನಡೆಸುತ್ತಿದ್ದು,ಟಿಎಂಎಸ್ ಹಾಗೂ ಟಿಎಸ್ಎಸ್ ನಲ್ಲಿ ಅಡಿಕೆ ವ್ಯವಹಾರಕ್ಕೆ ಸಂಘ ಪ್ರಶಂಸಿದೆ. ಸಂಘ ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದು,ಇನ್ನಷ್ಟು ಅಭಿವೃದ್ಧಿ ಕಾರ್ಯಯೋಜನೆ ಹೊಂದಿದೆ ಎಂದರು. ಸಂಘದ ನಿರ್ಧೆಶಕರಾದ ಆರ್ ಎಸ್ ಭಟ್ಟ,ಅಪ್ಪು ಅಚಾರಿ,ತಿಮ್ಮಣ್ಣ ಘಟ್ಟಿ, ಎಂಎನ್ ಭಟ್ಟ,ಪ್ರಭಾ ಗ್ರ್ಯಾಬಿಯಲ್ ಫರ್ನಾಂಡೀಸ್,ನರಸಿಂಹ ಕೋಣೆಮನೆ, ಮುಖ್ಯಕಾರ್ಯನಿರ್ವಾಹಕ ಎಂ ಎಸ್ ಹೆಗಡೆ ಇದ್ದರು.