ಸಣ್ಮನೆಯ ಸುರೇಶ್ ಶೇಟ್ ನಿಧನ

ಸಿದ್ದಾಪುರ : ಬಂಗಾರದ ಅಂಗಡಿ ನೆಡೆಸಿಕೊಂಡು ಜೀವನ ನಡೆಸುತ್ತಾ ದೈವಜ್ಞ ಸಮಾಜದಲ್ಲಿ ಗಂಡು ಹೆಣ್ಣಿನ ಸಂಬಂಧ ಜೋಡಿಸುತ್ತ
ನೂರಕ್ಕೂ ಹೆಚ್ಚು ಜೋಡಿಗೆ ದಾಂಪತ್ಯ ಜೀವನ ನಡೆಸಲು ದಾರಿ ತೋರಿಸಿಕೊಟ್ಟ ಸಣ್ಮನೆಯ ಸುರೇಶ್ ಶೇಟ್ ಸಾವಿನ ನಂತರ ಕಣ್ಣುಗಳನ್ನು ದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಪಟ್ಟಣದ ಹೊನ್ನೇಗುಂಡಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಜ್ಯುವೆಲ್ಲರಿ ವರ್ಕ್ಸ್ ನ ಮಾಲೀಕರಾದ ಸುರೇಶ್ ನಾಗಪ್ಪ ಶೇಟ್ ( 70) ಇವರು ಇತೀಚೆಗೆ ಬೆಂಗಳೂರಿನ ಶ್ರೇಯಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಮರಣದ ನಂತರ ಕಣ್ಣುಗಳನ್ನು ಬೆಂಗಳೂರನ ನಾರಾಯಣ ನೇತ್ರಾಲಯ ಕ್ಕೆ ದಾನ ನೀಡಲಾಗಿದೆ. ಇವರ ನಿಧನಕ್ಕೆ ದೈವಜ್ಞ ಸಮಾಜದ ಅನೇಕ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.