ಭಟ್ಕಳ: ಗೌರಿ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಭಟ್ಕಳದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ವಿಷ್ಣುವರ್ಧನ ನೇತೃತ್ವದಲ್ಲಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಪಥ ಸಂಚಲನ(ರೂಟ್ ಮಾರ್ಚ್) ನಡೆಸಿದರು.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ವಿಶ್ವಾಸವನ್ನು ತುಂಬಲು ಹಾಗೂ ಪೊಲೀಸ್ ಪಡೆಯ ಸನ್ನದ್ದತೆಯನ್ನು ಪ್ರದರ್ಶಿಸಲು ಪೊಲೀಸ್ ಪಡೆಯಿಂದ ಜನಸ್ನೇಹಿ ವ್ಯವಸ್ಥೆಯ ಭಾಗವಾಗಿ ಪೊಲೀಸ ವರಿಷ್ಠಾಧಿಕಾರಿಯ ನೇತೃತ್ವದದಲ್ಲಿ ರೂಟ್ ಮಾರ್ಚ್ ನಡೆಸಿದರು.
ಬಂದರ ರಸ್ತೆಯಿಂದ ಹೊರಟ ಪಥ ಸಂಚಲನ(ರೂಟ್ ಮಾರ್ಚ್) ಸಂಸುದ್ದಿನ್ ಸರ್ಕಲ್ ನಿಂದ ತಾಲೂಕು ಪಂಚಾಯತ ಮುಂಭಾಗದಿಂದ ಪಿ.ಎಲ್.ಡಿ ಬ್ಯಾಂಕ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣದಿಂದ ಮಾರಿಕಟ್ಟೆ ಮಾರ್ಗವಾಗಿ ಹೊರಟ ಪಥ ಸಂಚಲನ ಚನ್ನಪಟ್ಟಣ ಹನುಮಂತ ದೇವಸ್ಥಾನ ಆವರಣದಲ್ಲಿ ಮುಕ್ತಾಯ ಗೊಂಡಿತ್ತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶ್ರೀಕಾಂತ ಕೆ, ಸಿಪಿಐಗಳಾದ ಗೋಪಿ ಕ್ರಷ್ಣ ಹಾಗೂ ಚಂದನ ಗೋಪಾಲ ಮುಂತಾದವರು ಉಪಸ್ಥಿತರಿದ್ದರು