ದಾಂಡೇಲಿಯ ಸ್ವಾಗತ್ ಹೋಟೆಲ್ ಮಾಲಕ ಸಂದೀಪ್ ಪೂಜಾರಿ ನಿಧನ

ದಾಂಡೇಲಿ : ನಗರದ ಹೋಟೆಲ್ ಉದ್ಯಮಿ, ಕೋಗಿಲಬನದ ನಿವಾಸಿ ಹಾಗೂ ಕೆ ಸಿ ವೃತ್ತದ ಹತ್ತಿರದಲ್ಲಿರುವ ಸ್ವಾಗತ್ ಹೋಟೆಲ್ ಮಾಲಕರಾದ ಸಂದೀಪ್ ಪೂಜಾರಿಯವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಭಾನುವಾರ ವಿಧಿವಶರಾದರು. ಮೃತರಿಗೆ 36 ವರ್ಷ ವಯಸ್ಸಾಗಿತ್ತು.

ಕಳೆದ ಅನೇಕ ವರ್ಷಗಳಿಂದ ಸ್ವಾಗತ್ ಹೋಟೆಲನ್ನು ನಡೆಸಿಕೊಂಡು ಬರುತ್ತಿದ್ದ ಸಂದೀಪ್ ಪೂಜಾರಿ ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಉಡುಪಿ ಜಿಲ್ಲೆಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಅಂತಿಮವಾಗಿ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ಮೃತರು ತಾಯಿ, ಪತ್ನಿ, ಮೂವರು ಸಹೋದರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.