ಯಲ್ಲಾಪುರ: ಮಹಿಳೆ ಮುಗ್ಧತೆಯಿಂದ ಸ್ವತಂತ್ರತೆಯತ್ತ ಹೆಜ್ಜೆ ಇಟ್ಟು ಸ್ವಾವಲಂಬಿಯಾಗಿದ್ದರೂ ಅವಳು ಎಂದೆಂದಿಗೂ ಮನೆ ಬೆಳಗುವ ಮಹಾಲಕ್ಷ್ಮಿ-ಶಿವಲೀಲಾ ಹುಣಸಗಿ

ಯಲ್ಲಾಪುರ: ಮಹಿಳೆ ಮುಗ್ಧತೆಯಿಂದ ಸ್ವತಂತ್ರತೆಯತ್ತ ಹೆಜ್ಜೆ ಇಟ್ಟು ಸ್ವಾವಲಂಬಿಯಾಗಿದ್ದರೂ ಅವಳು ಎಂದೆಂದಿಗೂ ಮನೆ ಬೆಳಗುವ ಮಹಾಲಕ್ಷಿಯಾಗಿದ್ದಾಳೆ ಎಂದು ಸಾಹಿತಿ ಶಿವಲೀಲಾ ಹುಣಸಗಿ ಹೇಳಿದರು.
ಅವರು ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ವಿಶ್ವ ಹಿಂದು ಪರಿಷತ್, ವಿಹಿಂಪ ಮಾತೃ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಸಮೂಹಿಕ ಅರಿಷಿಣ ಕುಂಕುಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಿ಼ಷಿಣ ಕುಂಕುಮ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಕೃತಿಯ ಸಕಾರಾತ್ಮಕ ಮೌಲ್ಯವನ್ನು ಪಸರಿಸುವ ಕಾರ್ಯವಾಗುತ್ತಿದೆ ಎಂದರು.
ವಿದ್ವಾನ ಅನಂತ ಭಟ್ಟ ಸಿದ್ರಪಾಲ ಮಾರ್ಗದರ್ಶನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕಮಾರ್ಚನೆ, ಲಲಿತಾ ಸಹಸ್ರನಾಮ ಪಠಣ ನಡೆಯಿತು. ಇದೇ ಸಂದರ್ಭದಲ್ಲಿ ಡಾ ಸ್ವಪ್ನಾ ಪಂಡಿತ ಹಾಗು ರಾಘವೆಂದ್ರ ವೃದ್ದಾಶ್ರಮದ ಮೆಲ್ವಿಚಾರಕಿ ಅಕ್ಷತಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಗ್ರಾಮದೇವಿಗೆ ಸಮಿತಿಯಿಂದ ವಿಶೇಷ ಪೂಜೆ ಉಡಿ ಸಲ್ಲಿಸಲಾಯಿತು. ಮೀರಾ ನಾಯ್ಕ, ವೀಣಾ ಯಲ್ಲಾಪುರಕರ, ಹಿಂದೂ ಜಾಗರಣಾ ವೇದಿಕೆ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವಕರ, ಪ್ರಮುಖರಾದ ಪ್ರಮೋದ ಹೆಗಡೆ, ರಾಮು ನಾಯ್ಕ, ನಾರಾಯಣ ನಾಯಕ, ಸರಿತಾ ಮುರಕುಂಬಿ ಉಪಸ್ಥಿತರಿದ್ದರು.
‌‌‌‌ ಶಶಿಕಲಾ ಅಂಬಿಗ, ಸಾಕ್ಷಿ ಮುರಕುಂಬಿ, ಮಂಡಳಿಯ ಕಾರ್ಯದರ್ಶಿ ಶ್ಯಾಮಿಲಿ ಪಾಟಣಕರ್, ಶೋಭಾ ಹುಲಮನಿ ನಿರ್ವಹಿಸಿದರು.