ಜೋಯಿಡಾ ತಾಲ್ಲೂಕಿನ ಚಾಪೋಲಿ ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಜೋಯಿಡಾ : ತಾಲೂಕಿನ ಚಾಪೋಲಿ ಕ್ರಾಸ್ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಇಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆದಿದೆ.

ಶ್ರೀ ಕ್ಷೇತ್ರ ಉಳವಿಗೆ ಹೋಗಿ ಹಿಂದುರುಗಿ ಬರುತ್ತಿದ್ದ ಕೆಎ 25 ಎಂಡಿ 8318 ಸಂಖ್ಯೆಯ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚಾಪೋಲಿ ಕ್ರಾಸ್ ಎಂಬಲ್ಲಿ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಪಲ್ಟಿಯಾಗಿ ಬಿದ್ದಿದೆ. ಕಾರಿನಲ್ಲಿದ್ದವರು ಪವಾಡ ಸದೃಶವಾಗಿ ಪಾರಾಗಿದ್ದಾರೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಜೋಯಿಡಾ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.