ಉಚಿತ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಮತ್ತು ಜೂಟ್ ಬ್ಯಾಗ್ ತಯಾರಿಕಾ ತರಬೇತಿಗೆ ಚಾಲನೆ

ಹಳಿಯಾಳ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ ಸಂಸ್ಥೆಯ ಸಭಾಭವನದಲ್ಲಿ 30 ದಿನಗಳ ಎಲೆಕ್ಟ್ರಿಕಲ್ ಮೋಟಾರ್ ರಿವೈಂಡಿಂಗ್ ತರಬೇತಿ ಮತ್ತು 13 ದಿನಗಳ ಜೂಟ್ ಬ್ಯಾಗ್ ತಯಾರಿಕಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಹಳಿಯಾಳ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯರಾದ ಸತೀಶ ಗಾಂವಕರರವರು ಮೋಟರ್ ವೈಂಡಿಂಗ್ ಉದ್ಯೋಗ ಅತಿ ಬೇಡಿಕೆ ಇರುವ ಉದ್ಯೋಗ. ಈ ತರಬೇತಿಯನ್ನು ನೀವು ಆಸಕ್ತಿ,ಮತ್ತು ಶೃದ್ದೆಯಿಂದ ಕಲಿತರೆ ನಿವು ಉದ್ಯೋಗಿಗಳಾಗಿ ಬೆಳೆಯುತ್ತಿರಿ ಎಂದು ತಿಳಿಸಿದರು.

ಇನ್ನೊರ್ವ ಅತಿಥಿಗಳಾದ ವಿದ್ಯಾ ಕಾನಿಟ್ಕರ್ ಅವರು ಜೂಟ್ ಬ್ಯಾಗ್ ತರಬೇತಿ ಅತ್ಯಂತ ಉಪಯುಕ್ತವಾದ ತರಬೇತಿಯಾಗಿದ್ದು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಜೂಟ್ ಬ್ಯಾಗ್ ಪರಿಣಾಮಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಬಡ್ಡಿ. ಸಂಸ್ಥೆಯ ಯೋಜನಾ ಸಂಯೋಜಕ ವಿನಾಯಕ ಚವ್ಹಾಣ್ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಿದರು.

ಸಂಸ್ಥೆಯ ಉಪನ್ಯಾಸಕ ವಿರೇಶ ತಾಳಿಕೋಟಿ, ಮಹೇಶ್ ಹೊಸಕೊಪ್ಪದವರ ಮತ್ತು ಶಿಭಿರಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.