ಹಳೆದಾಂಡೇಲಿ: ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದ ಅಪ್ರಾಪ್ತ ಬಾಲಕರು : ಎಚ್ಚರಿಕೆ ನೀಡಿದ ಪೊಲೀಸರು

ದಾಂಡೇಲಿ : ನಗರದ ಹಳೆದಾಂಡೇಲಿಯ ಹಾರ್ನಬಿಲ್ ಸಭಾಭವನದ ಸಮೀಪ ಸ್ವಾಮಿಲ್ಗೆ ಹೋಗುವ ರಸ್ತೆ ಪಕ್ಕದ ನಿರ್ಜನ ಪ್ರದೇಶದಲ್ಲಿರುವ ವಾಟರ್ ಟ್ಯಾಂಕ್ ಹತ್ತಿರ ಅಪ್ರಾಪ್ತ ಬಾಲಕರಿಬ್ಬರು ಮಾದವ ವಸ್ತು ಸೇವನೆ ಮಾಡುತ್ತಿದ್ದ ಸಂದರ್ಭದಲ್ಲಿ ನಗರ ಠಾಣೆಯ ಪೊಲೀಸರು ಆ ಇಬ್ಬರು ಅಪ್ರಾಪ್ತ ಬಾಲಕರನ್ನು ಹಿಡಿದು, ಅವರಿಗೆ ಎಚ್ಚರಿಕೆ ನೀಡಿದ ಘಟನೆ ಇಂದು ಭಾನುವಾರ ನಡೆದಿದೆ.

ಇಲ್ಲಿ ವಾಟರ್ ಟ್ಯಾಂಕ್ ಹತ್ತಿರದಲ್ಲಿ ಪ್ರತಿದಿನ ಯುವಕರು ತಂಡವನ್ನು ಕಟ್ಟಿಕೊಂಡು ಬಂದು ಮಾದಕ ವಸ್ತು ಸೇವನೆ ಮಾಡುತ್ತಿದ್ದಾರೆಂಬ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಪಿಎಸ್ಐ ಐ.ಆರ್.ಗಡ್ಡೇಕರ್ ಅವರ ಮಾರ್ದರ್ಶನದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದ ಹಿನ್ನಲೆಯಲ್ಲಿ ಅವರಿಬ್ಬರನ್ನು ನಗರ ಠಾಣೆಗೆ ಕರೆದುಕೊಂಡು ಹೋಗಿ ಬುದ್ಧಿ ಮಾತು ಹೇಳಿ, ಎಚ್ಚರಿಕೆಯನ್ನು ನೀಡಲಾಗಿದೆ.