ದಾಂಡೇಲಿಯಲ್ಲಿ ಮಾರುಕಟ್ಟೆಗೆ ಬಂದ ಬಣ್ಣ ಬಣ್ಣದ ಗಣೇಶ ಮೂರ್ತಿಗಳು

ದಾಂಡೇಲಿ : ಬಾದ್ರಪದ ಶುಕ್ಲದ ಚೌತಿಗೆ ದಿನಗಣನೆ ಆರಂಭವಾಗಿದೆ. ಎಲ್ಲ ಧರ್ಮಿಯರ ಅತ್ಯಂತ ಇಷ್ಟದ ಹಬ್ಬಗಳಲ್ಲಿ ಗಣೇಶನ ಹಬ್ಬ ಅತ್ಯಂತ ಪ್ರಮುಖ ಸಾಲಿನಲ್ಲಿ ನಿಲ್ಲತ್ತದೆ. ಗಣಪತಿ ಅಚಿದ್ರೆ ಹಾಗೆನೆ ಒಗ್ಗಟ್ಟು, ಎಲ್ಲರನ್ನು ಒಂದುಗೂಡಿಸುವ ಶಕ್ತಿದೇವರೆಂದೆ ಕರೆಯಲ್ಪಡುವ ದೇವರಾಗಿದ್ದಾರೆ. ಅಂದ ಹಾಗೆ ಮುಂದಿನ ತಿಂಗಳು ಸೆಪ್ಟೆಂಬರ್ ತಿಂಗಳ 19 ರಂದು ಚೌತಿ ಹಬ್ಬ ನಡೆಯಲಿದೆ. ಚೌತಿ ಹಬ್ಬದಂದು ಹಿಂದೂ ಧರ್ಮಿಯರ ಹೆಚ್ಚಿನ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಮಾಡುವುದು ವಾಡಿಕೆ ಮತ್ತು ಆಚರಣೆಯಾಗಿ ಮುಂದುವರಿದಿದೆ.

ಚೌತಿಗೆ ಇನ್ನೇನು ಒಂದು ತಿಂಗಳು ಇರುವಾಗಲೆ ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ದಾಂಡೇಲಿ ನಗರದ ಮಾರುಕಟ್ಟೆಯನ್ನು ಪ್ರವೇಶಿಸಿವೆ. ನಗರದ ಜೆ.ಎನ್.ರಸ್ತೆ, ಬರ್ಚಿ ರಸ್ತೆ, ಸಂಡೆ ಮಾರ್ಕೆಟ್ ಮೊದಲಾದ ಕಡೆಗಳಲ್ಲಿ ಗಣೇಶನ ಮೂರ್ತಿಗಳು ಮಾರಾಟಕ್ಕೆ ಅಣಿಯಾಗಿದ್ದು, ಹಿಂದೂ ಧರ್ಮಿಯರನ್ನು ತನ್ನತ್ತ ಸೆಳೆಯತೊಡಗಿದೆ.