ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ಮಾಜಿ ಮುಖ್ಯಮಂತ್ರಿ ದಿ ದೇವರಾಜ್ ಅರಸು ಪ್ರಶಸ್ತಿ

ಸಿದ್ದಾಪುರ : ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ಮಾಜಿ ಮುಖ್ಯಮಂತ್ರಿ ದಿ ದೇವರಾಜ್ ಅರಸು ಪ್ರಶಸ್ತಿ ದೊರೆತಿರುವುದು ನಾಮಧಾರಿ ಸಮಾಜಕ್ಕೆ ಸಿಕ್ಕ ಗೌರವವಾಗಿದೆ ಎಂದು ರಾಷ್ಟ್ರೀಯ ಈಡಿಗ ನಾಮಧಾರಿ ಬಿಲ್ಲವ ಮಹಾಮಂಡಳಿಯ ಉ.ಕ. ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ್ ಹೇಳಿದ್ದಾರೆ.
ಪಟ್ಟಣದಲ್ಲಿ ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿ ಹೇಳಿಕೆ ನೀಡಿದರು.
ಊಳುವವನೇ ಹೊಲದೊಡೆಯ ಕಾನೂನನ್ನು ಜಾರಿಗೆ ತಂದು ಬಡವರ ಧ್ವನಿಯಾದ ಮಾಜಿ ಮುಖ್ಯಮಂತ್ರಿ ಡಿ ದೇವರಾಜ್ ಅರಸು ಪ್ರಶಸ್ತಿ ಹೋರಾಟಗಾರ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪನವರಿಗೆ ದೊರೆತಿರುವುದು ನಮ್ಮ ಸಮಾಜಕ್ಕೆ ಸಿಕ್ಕಂತಹ ಗೌರವವಾಗಿದೆ ಇದರಿಂದ ನಮಗೆ ತುಂಬಾ ಸಂತೋಷವಾಗಿದೆ, ಇಂದಿನ ಯುವ ಜನತೆ, ವಿದ್ಯಾರ್ಥಿಗಳು, ರಾಜಕಾರಣಿಗಳು ಕಾಗೋಡು ತಿಮ್ಮಪ್ಪನವರ ಆದರ್ಶಗಳನ್ನ ಅಳವಡಿಸಿಕೊಂಡು ಸಮಾಜಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕೊಡುಗೆಯನ್ನು ನೀಡಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದರು.