ವಿಶ್ವ ಗುರು ಭಾರತ ಆಗಬೇಕೆಂಬ ಸ್ವಾಮಿವಿವೇಕಾನಂದರ ಕನಸು ಇಂದಿನ ಯುವ ಸಮೂಹದ ಕೈಯಲ್ಲಿದೆ – ಡಾ. ವಿವೇಕ ಉಡುಪ

ಭಟ್ಕಳ : ವಿವೇಕ ಜಾಗ್ರತ ಬಳಗಗಳು ಮಧ್ಯ ವಲಯ-4  ಡಿವೈನ್ ಪಾರ್ಕ ಟ್ರಸ್ಟ ಸಾಲಿಗ್ರಾಮ ಇದರ ಅಂಗ ಸಂಸ್ಥೆ ಸಾರಥ್ಯದಲ್ಲಿ 22ನೇ  “ಯೋಗ ಪರ್ಯಟನೆ” ವಿಶೇಷ ಸತ್ಸಂಗ ಕಾರ್ಯಕ್ರಮವು  ಇಲ್ಲಿನ ನಾಗ ಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಡಾ. ಗುರೂಜಿ ಅವರ ಸುಪುತ್ರ ಡಾ. ವಿವೇಕ ಉಡುಪ ಮಾತನಾಡಿ ‘ ಜಗತ್ತಿನಲ್ಲಿ ಮಾನಸಿಕ ಒತ್ತಡ ಇರುವವರ ಸಂಖ್ಯೆ ಹೆಚ್ಚುತ್ತಿದೆ. ನಮ್ಮಲ್ಲಿನ ಭಾವೋದ್ವೇಗ ಹೆಚ್ಚಿಸಿ ಮನಸ್ಸಿನ ಸಮತೋಲನ ಹಾಳು ಮಾಡಿಕೊಳ್ಳಲು ನಾವುಗಳೇ ಕಾರಣ. ಯುವ ಜನತೆಯು ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳುವ ದಾರಿ ಉತ್ತಮ ಪಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವ ಜನತೆಗಾಗಿ ಬಹುದೊಡ್ಡ ವ್ಯಕ್ತಿತ್ವ ವ್ರದ್ದಿಯ ಸಲಹೆಯನ್ನು ನೀಡುತ್ತಾ ಬಂದಿದ್ದು ಅದನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಮಿ ವಿವೇಕಾನಂದರ ವಿಶ್ವ ಗುರು ಕನಸು ನನಸಾಗಲಿದೆ. ಜಗತ್ತಿನಲ್ಲಿಯೇ ಇರದ ದೊಡ್ಡ ಯುವ ಸಂಪತ್ತು ನಮ್ಮ ಭಾರತದಲ್ಲಿದೆ. ಇದನ್ನು ಯುವ ಸಂಪತ್ತು ಗಮನ ಹರಿಸಿ ಉತ್ತಮ ಜೀವನ ಕಟ್ಟಿಕೊಳ್ಳಬೇಕು.
ಎಲ್ಲಾ ಧರ್ಮದ ಸರ್ಮ ಧರ್ಮದ ಮುಖ್ಯ ಕೇಂದ್ರ ಬಿಂದು ಹಾಗೂ ತತ್ವವನ್ನು ಪಾಲಿಸಿ ಜನರಿಗೆ ಒಳ್ಳೆಯ ಸಂದೇಶ ನೀಡುತ್ತಿರುವವರ ಸಂಸ್ಥೆ ಜಗತ್ತಿನಲ್ಲಿ ಇರುವುದು ಅದು ಡಿವೈನ್ ಪಾರ್ಕ ಆಗಿದೆ. ಇಂದಿನ ದಿನದಲ್ಲಿ ಚಾನಲಗಳ ಸಂಖ್ಯೆ 1 ಸಾವಿರಕ್ಕೂ ಅಧಿಕ ಆಗಿದೆ. ಒಂದೂವರೆಯ ತಾಸಿನಲ್ಲಿ ನಮ್ಮಲ್ಲಿನ ಮನಸ್ಸು ಕೆಡುತ್ತಿದೆ. ಇದು ಸತ್ಯಸ್ಯ ಸತ್ಯ.
ಜನರ ಕಲ್ಯಾಣಕ್ಕಾಗಿ ಇರುವುದು ನಮ್ಮ ಡಿವೈನ್ ಪಾರ್ಕ ಆಗಿದೆ.

ಮಕ್ಕಳಿಗೆ ಓದು ಬೆಳಿ ಹಣ ಮಾಡು ಎನ್ನುವುದೇ ಆಗಿದೆ. ಆದರೆ ಸಮಾಜಕ್ಕೆ ಉಪಕಾರಿ ಹಾಗೂ ಕುಟುಂಬಕ್ಕೆ ಸಹಕಾರಿಯಾಗಿ ದುಡಿದು 10% ಸಾಮಾಜಿಕವಾಗಿ ಹಣವನ್ನು ಮೀಸಲಿಟ್ಟು ಬದುಕಬೇಕು.

ಸ್ವಾರ್ಥವೇ ಜಗತ್ತಾಗಿದೆ ಈಗ ಇದು ಬದಲಾಗಬೇಕಾದರೆ ನಾವುಗಳೇ ನಮ್ಮನ್ನು ಬದಲಾಯಿಸಿಕೊಂಡಲ್ಲಿ ಮಾತ್ರ ಸ್ವಾರ್ಥ ಹೋಗಲಾಡಿಸಲು ಸಾಧ್ಯ. ವಂಶ ಬೇಳಬೇಕಾದರೆ ಮಕ್ಕಳು ಸಮಾಜದ ಆಸ್ತಿಯಾಗಬೇಕಾದರೆ ದುಷ್ಟ ಚಟಗಳಿಗೆ ಬಲಿಯಾಗಲು ಬಿಡಬೇಡಿ. ಇದರಿಂದ ಆಕರ್ಷಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಪಾಲಕರಾಗಿದ್ದೇನೆ. ಮಕ್ಕಳಿಗೆ ಧರ್ಮದ ಶ್ರದ್ಧೆ ಹಾಗೂ ಸಮಾಜದ ಕಾಳಜಿಯನ್ನು ಮನೆಯಿಂದಲೇ ಕಲಿಸಬೇಕು ಎಂದರು.

ಅಜಾಗ್ರತೆ ಅಸಡ್ಡೆಯಿಂದಾಗಿ ನಮ್ಮಲ್ಲಿನ ಅನಿಯಮಿತ ಆಹಾರ ಸೇವನೆಯಿಂದ ನಮ್ಮ ದೇಹ ಹಾಳು ಮಾಡಿಕೊಂಡು ಬದುಕುತ್ತಿದ್ದೇವೆ. ಮನುಷ್ಯ ಜನ್ಮ ಎನ್ನುವುದು ಬಹಳ ದುರ್ಲಭ. ಹಾಳು ಮಾಡಿಕೊಂಡು ಹುಟ್ಟಿ ಸಾಯಬೇಡಿ.
ದುಷ್ಛಟಗಳು ಇತ್ತೀಚಿನ ದಿನದಲ್ಲಿ ವ್ಯಕ್ತಿಯನ್ನು ಬಲಿತೆಗೆದುಕೊಳ್ಳುತ್ತಿದೆ. ಸರಕಾರಕ್ಕೆ ಜನರ ದುಷ್ಚಟಗಳ ವ್ರದ್ದಿಯಿಂದ 30 ಸಹಸ್ರ ಕೋಟಿ ಜಾಸ್ತಿ ಆದಾಯ ಈ ಹಿನ್ನೆಲೆ ಗಲ್ಲಿ ಗಲ್ಲಿಯಲ್ಲಿ ಬಾರ್ ಎಂಡ ರೆಸ್ಟೋರೆಂಟ್ ತಲೆ ಎತ್ತಿವೆ ಇದು ಬೇಸರದ ಸಂಗತಿ ಎಂದರು.

ಯೋಗ ಪರ್ಯಟನ ಕಾರ್ಯಕ್ರಮದಿಂದ ಸಮಾಜಕ್ಕೆ ಮನುಷ್ಯನ ಉತ್ತಮ ಆರೋಗ್ಯ ವಿಚಾರಗಳನ್ನು ಬೆಳೆಸಿ ವ್ಯಕ್ತಿಯನ್ನು ರೂಪಿಸುವುದಾಗಿದೆ. ವ್ಯಕ್ತಿ ನಡೆಸುತ್ತಿರುವ ಸಂಸ್ಥೆ ಅಲ್ಲ‌ ಇದು ಶಕ್ತಿ ನಡೆಸುತ್ತಿರುವ ಸಂಸ್ಥೆ ಆಗಿದೆ.

ಸ್ವಾಮಿ ವಿವೇಕಾನಂದರು ಹೇಳಿದ ಮಾತು ನೆನಪಿಸಿಕೊಳ್ಳಬೇಕು. “ಯಾವ ಮಹಿಳೆಗೆ ಶಿಕ್ಷಣ ಗುಣ ಸಂಸ್ಕೃತಿಯನ್ನು ಆಧ್ಯಾತ್ಮದ ಜೀವನ ಮಾಡುತ್ತಾಳೋ ಅವಳು ಸಮಾಜದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ.”  ಆಗ ಮಾತ್ರ ಭಾರತ ವಿಶ್ವ ಗುರು ಆಗಲಿದೆ. ಭಾರತದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರು ಸೇವೆ ಸ್ಥಾನದಲ್ಲಿದ್ದಾರೆ. ಡಿವೈನ್ ಪಾರ್ಕನಿಂದ ಸೋತ ವ್ಯಕ್ತಿ ತನ್ನ ಜೀವನ ಮತ್ತೆ ಆರಂಭಿಸಲು ಧೈರ್ಯ ಸ್ಥೈರ್ಯವನ್ನು ನೀಡಿ ಬದುಕು ಕಟ್ಟಿಕೊಳ್ಳುವ ಕೆಲಸ ಮಾಡುತ್ತಿದೆ. ಯೋಗಬನದಲ್ಲಿ ಸಮಾಜದ ಉದ್ಧಾರಕ್ಕಾಗಿ ಚಳುವಳಿ ಮಾಡುತ್ತಿದ್ದೇವೆ. ಮನೆ ಮನೆಯಲ್ಲಿ ರಾಕ್ಷಸಿಯ ಗುಣ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಹಿಳೆಯರಾಗಿ ಆಧ್ಯಾತ್ಮ ಶಿಕ್ಷಣದೊಂದಿಗೆ ಅವರ ಧೈರ್ಯ ನೀಡುವ ಕೆಲಸ ಆರಂಭಿಸಲಿದ್ದೇವೆ.  ಅಂದು ವಿವೇಕಾನಂದರ ಶ್ರಮದಿಂದ ಇಂದು ಧರ್ಮ ಉಳಿದಿದೆ. ಇಲ್ಲವಾದಲ್ಲಿ ಹಿಂದು ಧರ್ಮ ಛಿದ್ರ ಛಿದ್ರವಾಗುತ್ತಲಿತ್ತು.

ತಂತ್ರಜ್ಞಾನ ಎಷ್ಟೇ ಬೆಳೆದರು ಸಹ ಸಾವನ್ನು ನಿಯಂತ್ರಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಮನುಷ್ಯರಾದ ನಾವು ಹುಟ್ಟಿದ ಮೇಲೆ ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು. ಇದನ್ನೇ ವಿವೇಕಾನಂದರರು ಡಿವೈನ ಪಾರ್ಕನ ಮೂಲಕ ಉತ್ತಮ ಆರೋಗ್ಯಕರ ಸಂದೇಶವನ್ನು ನೀಡುತ್ತಿದ್ದೇವೆ. ವಿವೇಕಾನಂದರರು ಅಂದೇ ಹೇಳಿದ್ದರು ಸಮಾಜದ ಪರವಾಗಿ ಉತ್ತಮ ಸಾಮಾಜಿಕ ಕಳಕಳಿಯಿಂದ ಬದುಕು ಸಾಧಿಸಬೇಕು ಎಂದಿದ್ದರು ಅದು ಇಂದು ಸಾಕಾರಗೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರಿಗೆ ಆರತಿ ಎತ್ತುವ ಮೂಲಕ ಪೂಜೆ ಸಲ್ಲಿಸಿ ಶ್ರೀ ರಾಮ ಸ್ತೋತ್ರದ ಪಠಣದ ಮೂಲಕ ಆರಂಭಿಸಲಾಯಿತು.

ಕಾರ್ಯಕ್ರಮಕ್ಕೆ ಹೊನ್ನಾವರ, ಕುಮಟಾ, ಅಂಕೋಲಾ ಮತ್ತು ಕಾರವಾರದಿಂದ ಡಿವೈನ್ ಪಾರ್ಕನ ಸಾವಿರಾರು ಭಕ್ತರು ವಾಹನದ ಮೂಲಕ ಆಗಮಿಸಿ ಪಾಲ್ಗೊಂಡರು.

ವೇದಿಕೆಯಲ್ಲಿ ಭಟ್ಕಳ ವಿವೇಕದ ಪ್ರಮುಖರು, ಸಿ.ಟು ಅಧಿಕಾರಿ ಬಳಗದ ಎಮ್. ಎನ್. ನಾಯ್ಕ, ಭಟ್ಕಳ ಜಾಗ್ರತ ಬಳದ ಉಪಾಧ್ಯಕ್ಷ ಜಿ.ಪಿ.ರಾಜಶೇಖರ, ಹೊನ್ನಾವರ ವಿವೇಕ ಜಾಗ್ರತ ಬಳಗದ ಅಧ್ಯಕ್ಷ ಅನಂತ ಎಮ್. ಗೌಡ, ಕುಮಟಾ ಬಳಗದ ಕಾರ್ಯಾಧ್ಯಕ್ಷ ಸುರೇಶ ಅಂಬಿಗ, ಕದ್ರಾ ವಿವೇಕ‌ ಜಾಗ್ರತದ ಅಧ್ಯತಾಲೂಕಿನಿಂದ  ಗೌಡ ಉಪಸ್ಥಿತರಿದ್ದರು