ಭಟ್ಕಳದಲ್ಲಿ ಹಸುಳೆಯ ಗಂಟಲಿಗಿಳಿದ ಪ್ಯಾಂಟ್ ಬಟನ್! ಜೀವ ಉಳಿಸಿದ ಸರಕಾರಿ ಆಸ್ಪತ್ರೆ ವೈದ್ಯರು

ಭಟ್ಕಳ: 2 ತಿಂಗಳು 10 ದಿವಸದ ಹಸುಳೆಯೊಂದರ ಬಾಯಿಗೆ, ಮನೆಯಲ್ಲಿ ಆಟವಾಡಿಕೊ೦ಡಿದ್ದ ಇನ್ನೋರ್ವ 2 ವರ್ಷದ ಬಾಲಕಿ ಅಕ್ಕ ಚಾಕಲೇಟ್ ಎಂದು ಹೇಳಿಕೊಂಡು ಹಾಕಿದ್ದ ಜೀನ್ಸ್ ಪ್ಯಾಂಟ್ ಬಟನ್ ಹಸುಳೆಯ ಗಂಟಲಿನಲ್ಲಿ ಸಿಲುಕಿ ಉಸಿರಾಟ ನಡೆಸಲಾಗದೇ ಹೊರಳಾಡಿದ್ದು,ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಯಶಸ್ವಿ ಚಿಕಿತ್ಸೆಯಿಂದಾಗಿ ಹಸುಳೆ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಬಿಹಾರ ಮೂಲದ, ಕಳೆದ 12-13 ವರ್ಷಗಳಿಂದ ಭಟ್ಕಳ ರಂಗೀಕಟ್ಟೆಯಲ್ಲಿ ವಾಸಿಸುತ್ತಿರುವ ಪೇಟ್ ಪಾಲಿಷ್ ಕಾರ್ಮಿಕ ಕಮಲ ಕಿಶೋರ ಅವರ ಪುತ್ರಿ
ಅಮೃತ ಸಂಕಷ್ಟದಿಂದ ಪಾರಾದ ಹಸುಳೆಯಾಗಿದ್ದಾಳೆ. ಭಟ್ಕಳ ಸರಕಾರಿ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಸತೀಶ ನೇತೃತ್ವದ ವೈದ್ಯರ ತಂಡ ಕೊಳವೆಯ ಮೂಲಕ ಬಟನ್ ಅನ್ನು ಹೊರ ತೆಗೆದಿದ್ದು, ಹಸುಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಹಸುಳೆಯ ಪ್ರಾಣ ಉಳಿಸಿದ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯರ ಕಾರ್ಯ ದಕ್ಷತೆಯ ಬಗ್ಗೆ ಸಾರ್ವಜನಿಕರು ವಲಯದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ಶುಶ್ರೂಷಕಿಯರಾಧ ಪವಿತ್ರ,ಸುಮಿತ್ರಾ,ಶ್ರೇಯ ಮುಂತಾದವರು ಸೇರಿದಂತೆ ವೈದ್ಯರಿಗೆ ಸಾತ್ ನೀಡಿದರು.