ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದಲ್ಲಿ 100 ಅಡಿ ಕಂದಕಕ್ಕೆ ಬಿದ್ದ ಬಾಲಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾಲು

ಗ್ರ್ಯಾಂಡ್ ಕ್ಯಾನ್ಯನ್​ಗೆ  13 ವರ್ಷದ ಬಾಲಕನೊಬ್ಬ ಕುಟುಂಬದವರ ಜತೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಗ್ರ್ಯಾಂಡ್ ಕ್ಯಾನ್ಯನ್‌ ರಾಷ್ಟ್ರೀಯ ಉದ್ಯಾನನದಲ್ಲಿ ಬಂಡೆಯ ಮೇಲೆ ಕುಳಿತಿರುವಾಗ ಆಯತಪ್ಪಿ 100 ಅಡಿ ಕೆಳಗೆ ಕಂದಕಕ್ಕೆ ಬಿದ್ದಿದ್ದಾನೆ.

9 ಮೂಳೆಗಳು ಮುರಿದಿವೆ, ಶ್ವಾಸಕೋಶಕ್ಕೂ ಪೆಟ್ಟು ಬಿದ್ದಿದೆ, ಕೈಕಾಲುಗಳು ಮುರಿದಿವೆ, ಬೆರಳುಗಳಿಗೂ ತೊಂದರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ನಮ್ಮ ಮಗನನ್ನು ಜೀವಂತವಾಗಿ ನೋಡುತ್ತೇನೆ ಎನ್ನುವ ಭರವಸೆಯೇ ಹೊರಟುಹೋಗಿದ್ದು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

ಫೋಟೊ ತೆಗೆಯುವ ವೇಳೆ ಕಲ್ಲು ಬಂಡೆಗಳ ನಡುವೆ ಕುಳಿತಿದ್ದೆ, ಅಲ್ಲಿಂದಲೇ ಜಾರಿ ಬಿದ್ದೆ, ಹಿಡಿದುಕೊಳ್ಳಲು ಏನೂ ಸಿಗಲಿಲ್ಲ, ಕೊನೆಗೆ ಮತ್ತೊಂದು ಕಲ್ಲನ್ನು ಹಿಡಿದುಕೊಂಡೆ ತುಂಬಾ ಹೊತ್ತು ಅದನ್ನೂ ಹಿಡಿದುಕೊಳ್ಳಲು ಆಗದೆ ಕೆಳಗೆ ಬಿದ್ದೆ, ಬಿದ್ದ ಬಳಿಕ ಏನೂ ನೆನಪಿಲ್ಲ ಸ್ವಲ್ಪ ಎಚ್ಚರವಾಗುವಷ್ಟರಲ್ಲಿ ಆಂಬ್ಯುಲೆನ್ಸ್​ನಲ್ಲಿದ್ದೆ, ಗ್ರ್ಯಾಂಡ್​ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದ ತಂಡವು ಬಾಲಕನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.