ಜೋಯಿಡಾ : 9 ಜನ ಸದಸ್ಯರಿರುವ ಜೋಯಿಡಾ ತಾಲ್ಲೂಕಿನ ಕಾತೇಲಿ ಗ್ರಾಮ ಪಂಚಾಯ್ತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ಚೆನ್ನಮ್ಮ ಶಿವಪ್ಪ ಡೊಂಬರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಹುದ್ದೆಗೆ ಮಾಜಿ ಗ್ರಾ.ಪಂ ಉಪಾಧ್ಯಕ್ಷರಾದ ಆಕಾಶ್ ಅನಸ್ಕರ್ ಮತ್ತು ಪ್ರವೀಣ್ ನಾಯ್ಕ ಅವರು ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆಗೆ ಬಿಜೆಪಿ ಬೆಂಬಲಿತ ಆಕಾಸ್ ಅನಸ್ಕರ್ ಅವರು ನಾಮಪತ್ರ ಸಲ್ಲಿಸಿದ್ದರೂ, ಮತದಾನ ಪ್ರಕ್ರಿಯೆಯಲ್ಲಿ ಆಕಾಶ್ ಅನಸ್ಕರ್ ಸೇರಿದಂತೆ ನಾಲ್ವರು ಸದಸ್ಯರು ಮತದಾನ ಮಾಡಿರಲಿಲ್ಲ. ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಪ್ರವೀಣ್ ನಾಯ್ಕ ಅವರು 5 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆನಂದ್ ಪಾಟೀಲ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತು ಸದಸ್ಯರು ಹಾಗೂ ಮಾಜಿ ಜಿಪಸ ರಮೇಶ್ ನಾಯ್ಕ, ಕಾಂಗ್ರೆಸ್ ಮುಖಂಡರುಗಳಾದ ಮಂಗೇಶ್ ಕಾಮತ್, ಸುರೇಶ್ ಬಂಗಾರಿ, ಅನ್ನು ಪೆಡ್ನೇಕರ್, ಪ್ರಸನ್ನ ಗಾವಡಾ, ರಾಮದಾಸ್ ಗಾವಡಾ, ತುಕರಾಮ ಗಾವಾಡ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.