ಆಗಸ್ಟ್ 9 ರಂದು ದಿ ಹಂಡ್ರೆಡ್ ಲೀಗ್ನಲ್ಲಿ ನಡೆದ ಓವಲ್ ಇನ್ವಿನ್ಸಿಬಲ್ಸ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದ ಪರ ಕಣಕ್ಕಿಳಿದಿದ್ದ ಕ್ಲಾಸೆನ್ ಕೇವಲ 27 ಎಸೆತಗಳಲ್ಲಿ 60 ರನ್ ಚಚ್ಚಿದರು. ಕ್ಲಾಸೆನ್ ಅಬ್ಬರಕ್ಕೆ ಮ್ಯಾಂಚೆಸ್ಟರ್ ಒರಿಜಿನಲ್ಸ್‌ನ ಯಾವುದೇ ಬೌಲರ್ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದರಲ್ಲೂ ಪಾಕಿಸ್ತಾನ ಏಷ್ಯಾಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಉಸಾಮಾ ಮಿರ್ , ಕ್ಲಾಸೆನ್ ಅಬ್ಬರಕ್ಕೆ ಧೂಳಿಪಟವಾದರು.ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ತಂಡ ಹೆನ್ರಿಕ್ ಕ್ಲಾಸೆನ್ ಅವರ ಸ್ಫೋಟಕ ಬ್ಯಾಟಿಂಗ್ನಿಂದಾಗಿ 100 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 186 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಜೇಸನ್ ರಾಯ್ 42 ಎಸೆತಗಳಲ್ಲಿ 59 ರನ್ ಸಿಡಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಹೆನ್ರಿಕ್ ಕ್ಲಾಸೆನ್ ಕೇವಲ 27 ಎಸೆತಗಳಲ್ಲಿ 6 ಸಿಕ್ಸರ್‌ಗಳೊಂದಿಗೆ 222.22 ಸ್ಟ್ರೈಕ್ ರೇಟ್‌ನಲ್ಲಿ 60 ರನ್ ಚಚ್ಚಿದರು.
ದುಬಾರಿಯಾದ ಪಾಕ್ ಬೌಲರ್
ಅದರಲ್ಲೂ ಪಾಕಿಸ್ತಾನಿ ಸ್ಪಿನ್ನರ್ ಉಸಾಮಾ ಮಿರ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ ಓವಲ್ ಇನ್ವಿನ್ಸಿಬಲ್ ತಂಡ, ಈ ಬೌಲರ್ ಬೌಲ್ ಮಾಡಿದ ಕೇವಲ 10 ಎಸೆತಗಳಲ್ಲಿ 26 ರನ್ ಕಲೆಹಾಕಿತು. ಈ 10 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಕೂಡ ಸೇರಿದ್ದವು.
ಕೇವಲ 92 ರನ್‌ಗಳಿಗೆ ಆಲೌಟ್
ಇನ್ನು 186 ರನ್ಗಳ ಗುರಿ ಬೆನ್ನಟ್ಟಿದ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡದ ಬ್ಯಾಟಿಂಗ್ ವಿಭಾಗ ಸಂಪೂರ್ಣ ವಿಫಲವಾಯಿತು. ಹೀಗಾಗಿ ತಂಡ ಕೇವಲ 92 ರನ್‌ಗಳಿಗೆ ಆಲೌಟ್ ಆಗಿ 94 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು. ಜಾಮೀ ಓವರ್ಟನ್ 21 ಎಸೆತಗಳಲ್ಲಿ 37 ರನ್ ಕಲೆಹಾಕಿ ತಂಡದ ಪರ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ಇವರನ್ನು ಹೊರತು ಪಡಿಸಿ ಆರಂಭಿಕರಾಗಿ ಬಂದ ಜೋಸ್ ಬಟ್ಲರ್ 23 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರನ್ನು ಬಿಟ್ಟರೆ ತಂಡದ ಮತ್ತ್ಯಾವ ಬ್ಯಾಟರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇನ್ನ ಬೌಲಿಂಗ್ನಲ್ಲಿ ದುಬಾರಿಯಾಗಿದ್ದ ಉಸಾಮಾ ಮಿರ್ ಕೇವಲ 1 ರನ್ ಬಾರಿಸಿದ್ದನ್ನು ಬಿಟ್ಟರೆ ಬೇರೇನೂ ಮಾಡಲಿಲ್ಲ.
ಪಾಕಿಸ್ತಾನದ ಪರ ಮಿರ್ ಸಾಧನೆ
ಉಸಾಮಾ ಮಿರ್ ಈ ವರ್ಷ ಪಾಕಿಸ್ತಾನ ಪರ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದುವರೆಗೆ ಆಡಿರುವ6 ಏಕದಿನ ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಈ ವೇಳೆ 43 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು ಅವರ ಅತ್ಯುತ್ತಮ ಸಾಧನೆಯಾಗಿದೆ. ಮಿರ್ ಇನ್ನೂ ಪಾಕಿಸ್ತಾನದ ಪರ ಟೆಸ್ಟ್ ಮತ್ತು ಟಿ20 ಆಡಿಲ್ಲ.