ಹಳಿಯಾಳ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟ- ನಾಲ್ವರ ಮೇಲೆ ಪ್ರಕರಣ ದಾಖಲು

ಹಳಿಯಾಳ : ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿ, ಮೂವರನ್ನು ಬಂಧಿಸಿ ಬಂಧಿಸಿ, ನಗದನ್ನು ವಶಪಡಿಸಿಕೊಂಡ ಘಟನೆ ಹಳಿಯಾಳ ಪಟ್ಟಣದಲ್ಲಿ ನಡೆದಿದೆ.

ಹಳಿಯಾಳ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಹಣ ಕಟ್ಟಿ ಇಸ್ಪೀಟ್ ಎಲೆಯಾಟದಲ್ಲಿ ತೊಡಗಿದ್ದ ಖಚಿತ ಮಾಹಿತಿಯನ್ನಾಧರಿಸಿ ಹಳಿಯಾಳ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸೈ ಅಮೀನಸಾಬ್ ಅತ್ತಾರ ಅವರ ನೇತೃತ್ವದ ತಂಡ ದಾಳಿ ನಡೆಸಿ, ಆಟಕ್ಕೆ ಬಳಸಿದ್ದ ಇಸ್ಪಿಟ್ ಹಾಗೂ ನಗರದನ್ನು ವಶಪಡಿಸಿಕೊಂಡು ಇಸ್ಪೀಟ್ ಆಟದಲ್ಲಿ ನಿರತರಾಗಿದ್ದ ಹಳಿಯಾಳ ಪಟ್ಟಣದ ನಿವಾಸಿಗಳಾದ ಜ್ಯೋತಿಬಾ.ಪಿ.ಜಾಧವ್, ಯಲ್ಲಪ್ಪ.ಡಿ.ಸಾಳುಂಕೆ, ಮುನ್ನಾ ಮತ್ತು ಇನ್ನೋರ್ವನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ  ಕಲಂ 87 ಕೆ.ಪಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.

ಇನ್ನೂ ಹಳಿಯಾಳ ಪಟ್ಟಣ ಹಾಗೂ ಪಟ್ಟಣದ ಸುತ್ತಮುತ್ತಲು ಕೆಲವೆಡೆಗಳಲ್ಲಿ ಇಸ್ಪೀಟ್ ಎಲೆಯಾಟ ಜೋರಾಗಿ ನಡೆಯುತ್ತಿದ್ದು, ಅವನ್ನು ಸಹ ಮಟ್ಟಾ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ.