ಅಸ್ಸು ಗ್ರಾ.ಪಂ ಅಧ್ಯಕ್ಷರಾಗಿ ಲಕ್ಷ್ಮಿ ಚಂಬರ, ಉಪಾಧ್ಯಕ್ಷರಾಗಿ ರಾಮಚಂದ್ರ ಮಾಜಾಲಕರ ಆಯ್ಕೆ

ಜೋಯಿಡಾ : ಜೋಯಿಡಾ ತಾಲೂಕಿನ ಅಸ್ಸು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿ ಚಂಬರ ಹಾಗೂ ಉಪಾಧ್ಯಕ್ಷರಾಗಿ ರಾಮಚಂದ್ರ ಮಾಜಾಲಕರ ಆಯ್ಕೆಯಾಗಿದ್ದಾರೆ.

ಇಂದು ಸೋಮವಾರ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯು ಜರುಗಿತು.ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ ಸದಸ್ಯರಾದ ಮಾರುತಿ ಪಾಟೀಲ್ , ವಿರಾಜ ಪಂಡಿತ್,ಬಬಿತಾ ಕುಂಬಾರ ಸಹಕರಿಸಿದರು.

ಈ ಸಂದರ್ಭದಲ್ಲಿ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ ದೇಸಾಯಿ,ಮಾಜಿ ಜಿ.ಪಂ ಸದಸ್ಯ ಸಂಜಯ ಹಣಬರ,ಮಾಜಿ ತಾ.ಪಂ.ಉಪಾಧ್ಯಕ್ಷ ವಿಜಯ ಪಂಡಿತ ಹಾಗೂ ಇತರ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.