ಮುಂದಿನ ಎರಡು ತಿಂಗಳಲ್ಲಿ 2 ಪ್ರಮುಖ ಟೂರ್ನಿಗಳನ್ನು ಆಡಲಿದೆ. ಇದರಲ್ಲಿ ಮೊದಲು ಏಷ್ಯಾಕಪ್ ಜರುಗಿದರೆ, ಆ ಬಳಿಕ ಏಕದಿನ ವಿಶ್ವಕಪ್ ಶುರುವಾಗಲಿದೆ. ಅಂದರೆ ಈ ಎರಡೂ ಟೂರ್ನಿಗಳಿಗಾಗಿ ಟೀಮ್ ಇಂಡಿಯಾ ಬಲಿಷ್ಠ ಬಳಗವನ್ನು ರೂಪಿಸಬೇಕಿದೆ. ಹೀಗಾಗಿಯೇ ಎಲ್ಲಾ ಸ್ಟಾರ್ ಆಟಗಾರರು ಏಷ್ಯಾಕಪ್ನಲ್ಲಿ ಕಣಕ್ಕಿಳಿಯುವುದು ಖಚಿತ. ಇನ್ನು ಏಷ್ಯಾಕಪ್ನಲ್ಲಿ ಕಾಣಿಸಿಕೊಂಡ ಬಹುತೇಕ ಆಟಗಾರರು ಏಕದಿನ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಲಿದ್ದಾರೆ.ಏಕೆಂದರೆ ಏಷ್ಯಾಕಪ್ ಆಗಸ್ಟ್ 30 ರಿಂದ ಶುರುವಾಗಲಿದೆ. ಅತ್ತ ಏಕದಿನ ವಿಶ್ವಕಪ್ಗೆ ತಂಡವನ್ನು ಘೋಷಿಸಲು ಐಸಿಸಿ ವಿಧಿಸಿರುವ ಗಡುವು ಸೆಪ್ಟೆಂಬರ್ 5. ಅಂದರೆ ಏಷ್ಯಾಕಪ್ ನಡುವೆಯೇ ಭಾರತ ತಂಡ ಏಕದಿನ ವಿಶ್ವಕಪ್ ಬಳಗವನ್ನು ಪ್ರಕಟಿಸಬೇಕಿದೆ.
ಎನ್ಸಿಎ ಶಿಬಿರ:
ಇತ್ತ ಏಷ್ಯಾಕಪ್ ಆರಂಭಕ್ಕೂ ಒಂದು ವಾರ ಮುಂಚಿತವಾಗಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಟೀಮ್ ಇಂಡಿಯಾಗೆ ವಿಶೇಷ ಶಿಬಿರವನ್ನು ಏರ್ಪಡಿಲಾಗಿದೆ. ಆಗಸ್ಟ್ 24 ರಿಂದ 29 ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಏಷ್ಯಾಕಪ್ಗೆ ಆಯ್ಕೆಯಾಗುವ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ವಿಶೇಷ ಎಂದರೆ ಈ ಶಿಬಿರದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಅಂದರೆ ಈ ಇಬ್ಬರು ಆಟಗಾರರು ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇದಾಗ್ಯೂ ಚೇತರಿಕೆಯ ಅಂತಿಮ ಹಂತದಲ್ಲಿರುವ ಇಬ್ಬರೂ ಕೂಡ ಎನ್ಸಿಎ ಶಿಬಿರದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ಕೆಎಲ್ ರಾಹುಲ್ ಅಥವಾ ಶ್ರೇಯಸ್ ಅಯ್ಯರ್ ಈಗ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಇದಾಗ್ಯೂ ಅವರು ತಂಡದ ಪ್ರಮುಖ ಭಾಗವಾಗಿದ್ದಾರೆ. ಹೀಗಾಗಿ ಇಬ್ಬರೂ ಶಿಬಿರಕ್ಕೆ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಅಂದರೆ ಏಷ್ಯಾಕಪ್ ಆರಂಭದ ವೇಳೆಗೆ ಈ ಇಬ್ಬರು ಆಟಗಾರರು ಫಿಟ್ ಆಗುವುದು ಬಹುತೇಕ ಖಚಿತ ಎನ್ನಬಹುದು. ಅಲ್ಲದೆ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಅವರನ್ನು ಏಷ್ಯಾಕಪ್ನಲ್ಲೂ ಎದುರು ನೋಡಬಹುದಾಗಿದೆ. ಇದೇ ಕಾರಣದಿಂದಾಗಿ ಇಬ್ಬರು ಆಟಗಾರರಿಗೆ ಎನ್ಸಿಎ ಶಿಬಿರಕ್ಕೆ ಬುಲಾವ್ ನೀಡಲಾಗುತ್ತಿದೆ.
ಏಷ್ಯಾಕಪ್ ವೇಳಾಪಟ್ಟಿ:
- ಆಗಸ್ಟ್ 30- ಪಾಕಿಸ್ತಾನ್ vs ನೇಪಾಳ (ಮುಲ್ತಾನ್)
- ಆಗಸ್ಟ್ 31- ಬಾಂಗ್ಲಾದೇಶ್ vs ಶ್ರೀಲಂಕಾ (ಕ್ಯಾಂಡಿ)
- ಸೆಪ್ಟೆಂಬರ್ 2- ಭಾರತ vs ಪಾಕಿಸ್ತಾನ್ (ಕ್ಯಾಂಡಿ)
- ಸೆಪ್ಟೆಂಬರ್ 3- ಬಾಂಗ್ಲಾದೇಶ್ vs ಅಫ್ಘಾನಿಸ್ತಾನ್ (ಲಾಹೋರ್)
- ಸೆಪ್ಟೆಂಬರ್ 4- ಭಾರತ vs ನೇಪಾಳ (ಕ್ಯಾಂಡಿ)
- ಸೆಪ್ಟೆಂಬರ್ 5- ಶ್ರೀಲಂಕಾ vs ಅಫ್ಘಾನಿಸ್ತಾನ್ (ಲಾಹೋರ್)
- ಸೂಪರ್-4 ಹಂತದ ವೇಳಾಪಟ್ಟಿ:
- ಸೆಪ್ಟೆಂಬರ್ 6- A1 Vs B2 (ಲಾಹೋರ್)
- ಸೆಪ್ಟೆಂಬರ್ 9- B1 Vs B2 (ಕೊಲಂಬೊ)
- ಸೆಪ್ಟೆಂಬರ್ 10- A1 Vs A2 (ಕೊಲಂಬೊ)
- ಸೆಪ್ಟೆಂಬರ್ 12- A2 Vs B1 (ಕೊಲಂಬೊ)
- ಸೆಪ್ಟೆಂಬರ್ 14- A1 Vs B1 (ಕೊಲಂಬೊ)
- ಸೆಪ್ಟೆಂಬರ್ 15- A2 Vs B2 (ಕೊಲಂಬೊ)
- ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)