ದಾಂಡೇಲಿ : ಪೊಲೀಸ್ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಎಸ್.ಲೋಕಾಪುರ ಅವರಿಗೆ ಇದೀಗ ಮುಂಡಗೋಡಕ್ಕೆ ವರ್ಗಾವಣೆಯಾಗಿದೆ.
ಇನ್ನೂ ಕೆಲವೆ ತಿಂಗಳೊಳಗೆ ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಲಿರುವ ಬಿ.ಎಸ್.ಲೋಕಾಪುರ ಅವರು ಕಳೆದ 14 ತಿಂಗಳುಗಳಿಂದ ದಾಂಡೇಲಿ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾಗಿ ಅನುಪಮ ಸೇವೆಯನ್ನು ಸಲ್ಲಿಸಿದ್ದರು. ಹಲವಾರು ಪ್ರಕರಣಗಳನ್ನು ಬೇಧಿಸುವ ಮೂಲಕ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದರು. ದಾಂಡೇಲಿ ಪೊಲೀಸ್ ವೃತ್ತದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಯಶಸ್ವಿಯಾಗಿ ಕಾಪಾಡಿಕೊಂಡು ಬರುವಲ್ಲಿ ಬಿ.ಎಸ್.ಲೋಕಾಪುರ ಅವರು ಯಶಸ್ವಿಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.