ಅಂಕೋಲಾ:- ಇಲ್ಲಿನ ಹಿಲ್ಲೂರ ಕ್ಲಷ್ಟರಿನ ಕಿರಿಯ ಪ್ರಾಥಮಿಕ ಶಾಲೆ ಮರಕಾಲದಲ್ಲಿ ಮುಖ್ಯೋಪಾದ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ರಮಾನಂದ ಟಿ ನಾಯಕರು ಇತ್ತೀಚೆಗೆ ವಯೋನಿವೃತ್ತಿಯನ್ನು ಹೊಂದಿದ ಕಾರಣ ಗ್ರಾಮ ಪಂಚಾಯತ ಹಿಲ್ಲೂರು, ಮರಕಾಲ ಶಾಲೆ, ಎಸ್ ಡಿ ಎಮ್ ಸಿ, ಊರನಾಗರಿಕರು ಹಾಗೂ ಜಿಲ್ಲಾ ಶಿಕ್ಷಕ ಸಂಘ ಮತ್ತು ಇಲಾಖೆಯ ಅಧಿಕಾರಿಗಳ ವತಿಯಿಂದ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಕುಮಟಾ ಡಯಟ್ ಪ್ರಾಂಶುಪಾಲರಾದ ಶ್ರೀ ಎನ್ ಜಿ ನಾಯಕ ಅವರು ರಮಾನಂದ ನಾಯಕರನ್ನು ಸನ್ಮಾನಿಸಿ ಮಕ್ಕಳಿಗೆ ನೋಟಬುಕ್ ವಿತರಣೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿಲ್ಲೂರು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಬೀರಣ್ಣ ನಾಯಕ( ಬಾಬು ಸುಂಕೇರಿ) ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಆನಂದು ಗಾಂವಕರರು ರಮಾನಂದ ನಾಯಕರನ್ನು ಸನ್ಮಾನಿಸಿ ಅವರ ಸಜ್ಜನಿಕೆ, ಹೊಂದಾಣಿಕೆ ಹಾಗೂ ಸೇವಾ ಮನೋಭಾವದ ಕುರಿತು ಮಾತನಾಡಿದರು. ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ನಾಗರತ್ನ ಗೌಡ ಅವರು ಮಾತನಾಡಿ ಸರ್ಕಾರಿ ನೌಕರಿಯಲ್ಲಿ ವರ್ಗಾವಣೆ, ನಿವೃತ್ತಿ ಮುಂತಾದವುಗಳ ನಡುವೆ ವ್ಯಕ್ತಿ ತಾನು ಸೇವೆಯಲ್ಲಿಯೇ ಸಮಾಧಾನ ಹೊಂದುವ ಬಗೆಯ ಕುರಿತು ಮಾತಾಡಿದರು.
ನಿಸರ್ಗ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಸತ್ಯಾನಂದ ಗಾಂವಕರ ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಗಣಪತಿ ಗೌಡ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಹಶಿಕ್ಷಕರಾದ ಶ್ರೀಮತಿ ಶೈಲಶ್ರೀ ವೆರ್ಣೇಕರ್ ಕಾರ್ಯಕ್ರಮವನ್ನು ಸಂಘಟಿಸಿ ನಿರ್ವಹಿಸಿದರು.
ಅಂಗನವಾಡಿ ಸಿಬ್ಬಂದಿಗಳು, ಹಳೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಭಾಸ್ಕರ ನಾಯ್ಕ ಹಾಜರಿದ್ದರು. ಶಿಕ್ಷಕರಾದ ಶ್ರೀ ವಿಶ್ವನಾಥ ನಾಯಕ, ಹಿಲ್ಲೂರು ಹೊಟೇಲ್ ಮಾಲಕ ಪ್ರಕಾಶ ನಾಯಕ ಹಾಗೂ ಊರಿನ ಎಲ್ಲ ಪಾಲಕರು, ನಾಗರಿಕರು ಭಾಗವಹಿಸಿದ ಈ ಕಾರ್ಯಕ್ರಮ ಬಹಳ ಚನ್ನಾಗಿ ಮೂಡಿಬಂದಿತು.
ಈ ಸಂದರ್ಭದಲ್ಲಿ ಮರಕಾಲ ಶಾಲೆಯ ಅಕ್ಷರದಾಸೋಹದ ಅಡುಗೆಯವರಾದ ಶೋಭಾ ನಾಯಕ ಕೂಡ ತೀವೃ ಅನಾರೋಗ್ಯದ ನಿಮಿತ್ತ ಅಡುಗೆ ಕೆಲಸಕ್ಕೆ ರಾಜೀನಾಮೆ ನೀಡಿದ್ದರಿಂದ ಅವರನ್ನೂ ಪ್ರೀತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.