ಸಿದ್ದಾಪುರ : ಮಾನವ ಕಳ್ಳ ಸಾಗಣೆಗೆ ಹಲವು ಕಳ್ಳ ದಾರಿಗಳಿವೆ ಆಮಿಷಗಳಿಗೆ ಬಲಿಯಾಗಿ ದೌರ್ಜನ್ಯಕ್ಕೀಡಾಗುವದಕ್ಕಿಂತ ಸದಾ ಜಾಗೃತರಾಗಿರುವದು ಒಳ್ಳೆಯದು ಎಂದು ಸ್ಥಳೀಯ ನ್ಯಾಯಾಲಯ ದ ನ್ಯಾಯಾಧೀಶ ತಿಮ್ಮಯ್ಯ ಜಿ ಹೇಳಿದರು.
ಅವರು ತಾ ಪಂ ಸಭಾಂಗಣದಲ್ಲಿ ಮಾನವ ಕಳ್ಳ ಸಾಗಣೆ ತಡೆ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿ ಪಾಲಕರು ತಮ್ಮ ಮಕ್ಕಳನ್ನು ಸದಾ ಜಾಗೃತ ಸ್ಥಿತಿಯಲ್ಲಿರುವಂತೆ ಕಾಳಜಿವಹಿಸಬೇಕು ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿದರೆ ಮಾನವ ಕಳ್ಳಸಾಗಣೆಯ ಪಿಡುಗನ್ನು ತಡೆಯಬಹುದು ವಿಶೇಷವಾಗಿ ಮಕ್ಕಳಲ್ಲಿ, ಮಹಿಳೆಯರಲ್ಲಿ ಅರಿವು ಮತ್ತು ಪ್ರತಿಭಟಿಸುವ ಗುಣ ಇರಬೇಕು. ವ್ಯವಸ್ಥೆಯನ್ನು ದೂರುವದಕ್ಕಿಂತ ನಮ್ಮ ಜವಾಬ್ದಾರಿಯನ್ನೂ ಅರಿಯಬೇಕು ತಪ್ಪುಗಳನ್ನು ವಿರೋಧಿಸಿ ಮಾನವ ಮೌಲ್ಯಗಳನ್ನು ಉಳಿಸಬೇಕು. ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ.
ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಿಗೆ ತ್ವರಿತ ಶಿಕ್ಷೆ ನೀಡಲಾಗುತ್ತದೆ ಬಾಲ ಕಾರ್ಮಿಕ ತಡೆ, ಬಾಲ್ಯವಿವಾಹ ತಡೆ, ಫೋಕ್ಸೊ ಕಾಯಿದೆಗಳು ಅತ್ಯಂತ ಪ್ರಬಲವಾಗಿವೆ ಎಂದರು.
ಅನಿತಾ ಪರ್ವತಿಕರ್ ವಿಷಯದ ಕುರಿತು ಉಪನ್ಯಾಸ ನೀಡಿದರು ಕಾರ್ಯಕ್ರಮದಲ್ಲಿ ಇ ಒ ದೇವರಾಜ್, ಬಿ ಇ ಒ ಜಿ ಐ ನಾಯ್ಕ್, ಟಿ ಎಚ್ ಒ ಡಾ ಲಕ್ಷ್ಮಿ ಕಾಂತ್ ನಾಯ್ಕ್, ಎ ಪಿ ಪಿ ಚಂದ್ರಶೇಖರ ಎಚ್ ಎಸ್, ಸಿ ಡಿ ಪಿ ಒ ಪೂರ್ಣಿಮಾ ದೊಡ್ಮನಿ ಮುಂತಾದವರು ಉಪಸ್ಥಿತರಿದ್ದರು.
ಅಂಗನವಾಡಿ ಶಿಕ್ಷಕಿಯರು ಮಾನವ ಕಳ್ಳ ಸಾಗಣೆ ತಡೆ, ಪೌಷ್ಟಿಕ ಆಹಾರ ಕುರಿತು ಕಿರು ನಾಟಕ ಪ್ರದರ್ಶಿಸಿದರು ನಾಟಕ ಕ್ಕೆ ಮೆಚ್ಚುಗೆ ವ್ಯಕ್ತವಾಯಿತು.