ದಾಂಡೇಲಿ : ಹೆಸ್ಕಾಂ ದಾಂಡೇಲಿ ವ್ಯಾಪ್ತಿಯಲ್ಲಿ ಬರುವ ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ ತಾಲ್ಲೂಕಿನಲ್ಲಿ ಒಟ್ಟು 59,266 ಹೆಸ್ಕಾಂ ಗ್ರಾಹಕ ಕುಟುಂಬಗಳಿದ್ದು, ಈ ಪೈಕಿ ಈಗಾಗಲೆ 45,422 ಹೆಸ್ಕಾಂ ಗ್ರಾಹಕ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿವೆ ಎಂದು ಹೆಸ್ಕಾಂ ದಾಂಡೇಲಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರಾದ ಪುರುಷೋತ್ತಮ ಮಲ್ಯ ಅವರು ಹೇಳಿದರು.
ಅವರು ದಾಂಡೇಲಿ ನಗರದಲ್ಲಿರುವ ಹೆಸ್ಕಾಂ ಕಾರ್ಯಾಲಯದಲ್ಲಿ ಇಂದು ಮಾಧ್ಯಮಕ್ಕೆ ಗೃಹಜ್ಯೋತಿ ಯೋಜನೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಾ, ಈ ಯೋಜನೆಯ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳುವಂತೆ ಕೋರಿದ್ದಾರೆ.